ಎರಡು ಸಮುದಾಯಗಳ ಜಗಳಕ್ಕೆ ತಿರುಗಿದ ನಾಮಫಲಕ ವಿವಾದ: ಹೆಬ್ಬೂರಿನಲ್ಲಿ ಲಾಠಿಚಾರ್ಚ್

hebburu_
Published on

ತುಮಕೂರು: ತಾಲೂಕಿನ ಹೆಬ್ಬೂರು ಬಸ್ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿರುವ ಪಾರ್ಕ್ನಲ್ಲಿಯೇ ಸಂಗೊಳ್ಳಿ ರಾಯಣ್ಣ ಸಂಘದ ನಾಮಫಲಕ ಅಳವಡಿಸಿರುವ ಘಟನೆ ಗ್ರಾಮದಲ್ಲಿ ಉದ್ವಿಘ್ನ ವಾತಾವರಣಕ್ಕೆ ಕಾರಣವಾಗಿದೆ.

ಗ್ರಾಮದ ಕೇಂದ್ರ ಭಾಗದಲ್ಲಿ ಸ್ಥಳೀಯರೇ ಇತ್ತೀಚೆಗಷ್ಟೇ ಕೆಂಪೇಗೌಡ ಪ್ರತಿಮೆ ಸ್ಥಾಪಿಸಿ, ಸಣ್ಣ ಉದ್ಯಾನವನ ಕೂಡ ನಿರ್ಮಿಸಿದ್ದರು, ರಾಯಣ್ಣನ ಪ್ರತಿಮೆಗೂ ಇದೇ ಸ್ಥಳದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಮತ್ತೊಂದು ಗುಂಪು ವಾದ ಮಂಡಿಸಿದ್ದು ಗಲಾಟೆ ಜಾಸ್ತಿಯಾಗಲು ಕಾರಣವಾಗಿದೆ.

ಇದೇ ಕಾರಣಕ್ಕೆ ಸೋಮವಾರ ಸಂಜೆ ಎರಡು ಗುಂಪುಗಳ ನಡುವೆ ವಾದ, ವಿವಾದಕ್ಕೆ ಕಾರಣವಾಗಿದ್ದು ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ.

ನಾಮಫಲಕ ಅಳವಡಿಸುವ ವಿಚಾರಕ್ಕೆ ಆರಂಭವಾದ ಗಲಾಟೆ ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗಿದ್ದು ಸ್ಥಳೀಯರು ಭಯಬೀತರಾಗಿದ್ದಾರೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net