

ತುಮಕೂರು: ತಾಲೂಕಿನ ಹೆಬ್ಬಾಕ ಕೆರೆ ದಶಕಗಳ ನಂತರ ಕೋಡಿ ಬಿದ್ದಿದ್ದು ಕೆರೆಯ ಹಿನ್ನೀರಿನಲ್ಲಿರುವ ಹಂಚಿಹಳ್ಳಿ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.
ಊರುಕೆರೆಯಿಂದ ತೋವಿನಕೆರೆ ಮಾರ್ಗವಾಗಿ ಸಾಗುವ ಮಾರ್ಗದಲ್ಲಿ ಎಫ್‌ಸಿಐ ಉಗ್ರಾಣದ ಹಿಂಭಾಗದ ಮನೆಗಳಿಗೆ ನೀರುನುಗ್ಗಿದ್ದು ಜನರ ಗೋಳು ಹೇಳತೀರದಾಗಿದೆ.
ಮೆಳೆಹಳ್ಳಿಯ ಶಾಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಕಾಳಜಿ ಕೇಂದ್ರ ಆರಂಭಿಸಲಾಗಿದ್ದು ಮನೆಗಳನ್ನು ತೊರೆದಿರು ಜನರು ತಾತ್ಕಾಲಿಕವಾಗಿ ಅಲ್ಲಿದ್ದಾರೆ.