ಮೈತ್ರಿ ಸರ್ಕಾರದಲ್ಲಿ ಕಮಿಷನ್ ವ್ಯವಹಾರ ನಡೆದಿದೆ

HDDDDDDD
Published on

ತುಮಕೂರು: ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿಯೂ ಕಮಿಷನ್ ವ್ಯವಹಾರ ನಡೆದಿದೆ, ನಾನು ಇದನ್ನು ನಿಲ್ಲಿಸಬೇಕೆಂದು ತೀರ್ಮಾನ ಮಾಡಿದ್ದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಕಮಿಷನ್ ದಂಧೆ ಹೆಚ್ಚಾಯಿತು. ಇದನ್ನು ತಡೆಯುವುದು ಯಾರೊಬ್ಬರಿಂದ ಆಗುವ ಕೆಲಸವಲ್ಲ, ಜನರು ಸಿದ್ಧರಾಗಬೇಕು ಎಂದರು.

ಅಗತ್ಯವಾದ ಕಠಿಣ ನಿರ್ಧಾರ ಮಾಡಬೇಕಾದರೆ ನಮ್ಮ ಸ್ವತಂತ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು, ನನ್ನ ಕಾಲದಲ್ಲೂ ಪರ್ಸಂಟೇಜ್ ನಡೆದುಕೊಂಡು ಬಂದಿದೆ. ಎಲ್ಲವೂ ನನಗೆ ಗೊತ್ತಿದೆ ಆದರೆ, ನನ್ನ ಕಚೇರಿಯೊಳಗೆ ರೇವಣ್ಣ ಇದ್ದರು, ಸರಿಪಡಿಸಿದ್ದರು ಎಂದರು.

ನಾನು ರೈತರ ಸಾಲ ಮನ್ನ ಮಾಡಿದೆ, ಅದರಲ್ಲಿ ಕಮಿಷನ್ ತೆಗೆದುಕೊಳ್ಳಲು ಆಗುತ್ತಾ? ರೈತರಿಂದ ಪ್ರೀತಿ ಗಳಿಸಬಹುದು, ಅದೇ ನನಗೆ ಕಮಿಷನ್ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net