

ಮಧುಗಿರಿ: ಪಟ್ಟಣದಲ್ಲಿ ಸೀಮೆ ಹಸುಗಳ ಕರುಗಳ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಗೆ ಪಟ್ಟಣದ ಪ್ರಧಾನ ಹಿರಿಯ ಸಿವಿಲï ಜಡ್ಜ್ ಮತ್ತು ಜೆಎಂಎಎಫ್‌ಸಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ತಾಲೂಕಿನ ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟ್ಟನಕುರಿಕೆ ಸಮೀಪದ ರಂಗಪ್ಪನಗುಟ್ಟೆಯಲ್ಲಿ ಕರುಗಳ ಮಾರಾಟ ಮಾಡುವ
ಉದ್ದೇಶದಿಂದ ಆರೋಪಿ ಅಸ್ಟರ್ ಪಾಷಾ ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು.
ಇಂದು ಜಾಮೀನಿನ ಅರ್ಜಿಯ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಎಚ್.ಎ.ಶಿಲ್ಪಾ ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಎಚ್.ಸಣ್ಣೀರಪ್ಪ ವಾದ ಮಂಡಿಸಿದರು.