ಪ್ರೇಮಿಗಳಿಬ್ಬರ ಪ್ರೇಮ ವಿವಾಹಕ್ಕೆ ಬಲಿಯಾಯ್ತು ಲಕ್ಷಾಂತರ ರೂ. ಮೌಲ್ಯದ ಅಡಿಕೆ ಗಿಡಗಳು!

TMK Love 1
Published on

ತುಮಕೂರು: ಬೇಡವೆಂದರು ಪ್ರೀತಿಸಿ ಮದುವೆಯಾಗಿದ ದ್ವೇಷಕ್ಕೆ ಬೆಲೆಬಾಳುವ ಅಡಿಕೆ ಗಿಡಗಳನ್ನು ನಾಶ ಪಡಿಸಿರುವ ಆರೋಪ ಹುಡುಗಿ ಮನೆಯವರ ವಿರುದ್ಧ ಕೇಳಿಬಂದಿದೆ. ತುಮಕೂರು ತಾಲೂಕಿನ ಮಲ್ಲಸಂದ್ರಪಾಳ್ಯದಲ್ಲಿ ಘಟನೆ ನಡೆದಿದೆ.

ಮಲ್ಲಸಂದ್ರಪಾಳ್ಯ ಗ್ರಾಮದ ರವಿಚಂದ್ರ ಹಾಗೂ ಅನು ಎಂಬವರು ಪ್ರೀತಿಸಿ ಕಳೆದ ಎರಡು ದಿನಗಳ ಹಿಂದಷ್ಟೇ‌ ಮದುವೆಯಾಗಿದ್ದರು. ಇಬ್ಬರ ಪ್ರೀತಿಗೆ ಹುಡುಗಿ ಮನೆಯವರ ವಿರೋಧವಿತ್ತು. ಹುಡುಗಿಗೆ ಮದುವೆ ಬೇಡ ಎಂದಿದ್ದರು. ಆದರೂ ಪ್ರೀತಿಸಿದ ಹುಡುಗನೇ ಅನು ಮದುವೆಯಾಗಿದ್ದಳು.

ಇದೇ ದ್ವೇಷಕ್ಕೆ ರವಿಚಂದ್ರರಿಗೆ ಸೇರಿದ 250 ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ ಎನ್ನಲಾಗಿದೆ. ಅನು ಪೋಷಕರಾದ ಸಂತೋಷ ಹಾಗೂ ಗಂಗಮ್ಮ ವಿರುದ್ಧ ಅಡಿಕೆ ಗಿಡಗಳ ನಾಶಪಡಿಸಿರುವ ಆರೋಪ ಕೇಳಿಬಂದಿದೆ.

ಅಡಿಕೆ ಗಿಡಗಳ ನಾಶದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಪ್ರಕರಣ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net