More

    ಮಧ್ಯರಾತ್ರಿ ಕಿರುತೆರೆ ನಟಿಯನ್ನು ಕೆಣಕಿ ಜೈಲು ಪಾಲಾದ ನಾಲ್ವರು ದುಷ್ಕರ್ಮಿಗಳು..!

    ನವದೆಹಲಿ: ದೆಹಲಿಯ ರೋಹಿಣಿ ಏರಿಯಾದಲ್ಲಿ ಕಿರುತೆರೆ ನಟಿ ಪ್ರಾಚಿ ತೆಹ್ಲಾನ್ ಕಾರು ಹಿಂಬಾಲಿಸಿ ಆಕೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ನಾಲ್ವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಬಾಸ್ಕೆಟ್​ ಬಾಲ್​ ಆಟಗಾರ್ತಿ ಮತ್ತು ನಟಿಯಾಗಿರುವ ಪ್ರಾಚಿ, ಸೋಮವಾರ ಮಧ್ಯರಾತ್ರಿ ಗಂಡನೊಂದಿಗೆ ಮನೆಗೆ ಮರಳುವಾಗ ಅವರ ಕಾರನ್ನು ಹಿಂಬಾಲಿಸಿದ ನಾಲ್ವರು ದುಷ್ಕರ್ಮಿಗಳು ಕೂಗಾಡಿದ್ದಾರೆ.

    ಇದನ್ನು ಓದಿರಿ: ಮದುವೆ ನೋಂದಣಿ ಮಾಡಿಸಲು ಹೋದ ಯುವತಿಗೆ ಕಾದಿತ್ತು ಶಾಕ್​: ಬಯಲಾಯ್ತು ಗಂಡನ ಮತ್ತೊಂದು ಮುಖ!

    ಇಷ್ಟೇ ಅಲ್ಲದೆ, ನಟಿ ಪ್ರಶಾಂತ್​ ವಿಹಾರ್​ನಲ್ಲಿರುವ ತಮ್ಮ ಮನೆಯನ್ನು ತಲುಪಿದಾಗ ದುಷ್ಕರ್ಮಿಗಳು ತಮ್ಮ ವಾಹನದಿಂದ ಕೆಳಗಿಳಿದು ಬಂದು ಪ್ರಾಚಿ ಅವರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ.

    ಮಂಗಳವಾರ ಬೆಳಗ್ಗೆ ಪ್ರಾಚಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲಿಸರು ನಾಲ್ವರನ್ನು ಬಂಧಿಸಿದ್ದು, ಘಟನೆ ನಡೆದ ಸಮಯದಲ್ಲಿ ಅವರು ಪಾನಮತ್ತರಾಗಿದ್ದರು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕಾರುಣ್ಯಾ ಈಗ ಆಗರ್ಭ ಶ್ರೀಮಂತೆ; ರೇಮೊ ಚಿತ್ರದಲ್ಲಿ ಮಾಡರ್ನ್ ಅವತಾರ..

    ನೇಹಾ ಶೆಟ್ಟಿ ಅಭಿನಯದ ತೆಲುಗು ಸಿನಿಮಾ ಶುರು

    8 ತಿಂಗಳ ಮಗುವಿನೊಂದಿಗೆ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಶರಣು: ಮಗುವಿನ ಜೀವ ಉಳಿದಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts