ರಾಗಿ ಖರೀದಿ ಕೇಂದ್ರಗಳ ಮುಂದೆ ರೈತರ ಗೋಳು

WhatsApp Image 2023-02-09 at 7.34.23 PM (1)
Published on

ತುಮಕೂರು: ಕನಿಷ್ಟ ಬೆಂಬಲ ಬೆಲೆಯಲ್ಲಿ ಜಿಲ್ಲೆಯಲ್ಲಿ ಆರಂಭವಾಗಿರುವ ಎಂಟು ರಾಗಿ ಖರೀದಿ ಕೇಂದ್ರಗಳು ಅವ್ಯವಸ್ಥೆಯ ಆಗರವಾಗಿದ್ದು ಗುಣಮಟ್ಟದ ನೆಪದಲ್ಲಿ ರೈತರನ್ನು ವಾರಗಟ್ಟಲೇ ಕಾಯಿಸಲಾಗುತ್ತಿದೆ.

ಜಿಲ್ಲೆಯಲ್ಲಿ 11 ರಾಗಿ ಖರೀದಿ ಕೇಂದ್ರಗಳಿದ್ದು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲಾಗುತ್ತಿದ್ದು ರೈತರಿಗೆ ಸರಿಯಾಗಿ ಮಾಹಿತಿ ನೀಡದೆ ಸಾವಿರಾರು ಟ್ರಾಕ್ಟರ್, ಲಾರಿಗಳು ಮಾರುಕಟ್ಟೆ ಮುಂದೆ ಜಮಾಯಿಸಿವೆ.

ಕ್ಯಾಂಟರ್ ಬೇಡ, ಟ್ರಾಕ್ಟರ್‌ಗಳಲ್ಲಿ ತನ್ನಿ: ರಾಗಿ ಖರೀದಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿರುವ ಅಧಿಕಾರಿಗಳು ಗೊಂದಲದ ಆದೇಶ ನೀಡುತ್ತಿರುವುದು ರೈತರನ್ನು ಮತ್ತಷ್ಟು ಗೊಂದಲಕ್ಕೀಡುಮಾಡಿದೆ.

ಮೇಲಾಧಿಕಾರಿಗಳ ಆದೇಶದಂತೆ ಫೆ.10ರಿಂದ ಟ್ರಾಕ್ಟರ್ ಹೊರತುಪಡಿಸಿ ಕ್ಯಾಂಟರ್‌ಗಾಡಿಗಳಲ್ಲಿ ಖರೀದಿ ಕೇಂದ್ರಕ್ಕೆ ರಾಗಿ ತರಬಾರದು ಎಂದು ರಾಗಿ ಖರೀದಿ ಅಧಿಕಾರಿ ಲಿಖಿತ ಸೂಚನೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ.

ಗುಣಮಟ್ಟ ಪರಿಶೀಲನೆ ಕಾರಣಕ್ಕೆ ಟ್ರಾಕ್ಟರ್‌ನಲ್ಲಿ ಮಾತ್ರ ರಾಗಿ ತರಬೇಕು ಎಂದು ಸೂಚಿಸಿರುವ ಅಧಿಕಾರಿಗಳ ಚಿಂತನೆಯೇ ಅನುಮಾನಕ್ಕೆ ಕಾರಣವಾಗಿದೆ, ಖರೀದಿ ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳಲಾಗದ ವಾಹನ ಬದಲಾಯಿಸಿದಾಕ್ಷಣ ಆಗುವ ಬದಲಾವಣೆಗಳೇನು ಎಂದು ರೈತರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net