ಸಂಚಾರಿ ನೇತ್ರ ಚಿಕಿತ್ಸಾಲಯಕ್ಕೆ ಚಾಲನೆ

9-2-23 Tumkur - Mobile Eye Hospital inauguration (15) (1)
Published on

ಪಾವಗಡ ರಾಮಕೃಷ್ಣ ಸೇವಾಶ್ರಮ, ಇನ್ಪೋಸಿಸ್ ಸಂಸ್ಥೆ ಸಹಯೋಗದಲ್ಲಿ 1.30ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗಿರುವ ಸಂಚಾರಿ ನೇತ್ರ ಚಿಕಿತ್ಸಾಲಯದ ನಿರ್ವಹಣೆಯ ಹೊಣೆಯನ್ನು ಪಾವಗಡದ ಶ್ರೀಶಾರದಾದೇವಿ ಸಂಚಾರಿ ಕಣ್ಣಿನ ಆಸ್ಪತ್ರೆ ವಹಿಸಿಕೊಂಡಿದೆ.

ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಮಾತನಾಡಿ, ಇನ್ಫೋಸಿಸ್ ಸಂಸ್ಥೆಯವರ ಸಹಕಾರದೊಂದಿಗೆ ಈ ಕ್ರಾಂತಿಕಾರಿ ಯೋಜನೆ ರೂಪಿಸಲಾಗಿದ್ದು ಸದುಪಯೋಗ ಪಡೆಯಬೇಕು ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಶಿಕ್ಷಣದಲ್ಲಿ ಉತ್ತಮ ವಿಷಯಗಳನ್ನು ಮಕ್ಕಳಿಗೆ ಪರಿಚಯಿಸಿ ಮಾತಾಪಿತೃಗಳು ಮಕ್ಕಳಿಗೆ ಶಿಕ್ಷಣದ ಜತೆಗೆ ಆರೋಗ್ಯವೂ ಮುಖ್ಯವಾದದ್ದು ಎಂಬ ಜವಾಬ್ದಾರಿ ಹೊರಬೇಕು ಎಂದರು.

ಸರ್ಕಾರ ಮಾಡುಬಹುದಾದ ಕೆಲಸಗಳನ್ನು ಪಾವಗಡದ ಜಪಾನಂದಜೀ ಮಾಡುತ್ತಿದ್ದಾರೆ ಎಂದರು. ಟೂಡಾ ಅಧ್ಯಕ್ಷ ಚಂದ್ರಶೇಖರ್, ಡಿಎಚ್‌ಒ ಡಾ.ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net