

ತುಮಕೂರು: ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ತೊರೆಯುವ ಮುಂಚೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದರು ಎಂದು ಡಿ.ಕೆ.ಶಿವಕುಮಾರ್ ಹೊಸಬಾಂಬ್ ಸಿಡಿಸಿದ್ದಾರೆ.
ಭಾರತ್ ಜೋಡೋ ಕಾರ್ಯಕ್ರಮ ಪೂರ್ವಭಾವಿಯಾಗಿ ತುರುವೇಕೆರೆಯಲ್ಲಿ ಇಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ನಾನು ಹಾಗೂ ಸಿದ್ಧರಾಮಯ್ಯ ಅವರನ್ನು ಎಂಎಲ್‌ಸಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರೂ ಪಕ್ಷ ತೊರೆದಿದ್ದಾರೆ ಎಂದು ಅಸಮಧಾನ ಹೊರಹಾಕಿದರು.
ನ್ಯಾಯಾಧೀಶರಾಗಿದ್ದ ಮುದ್ದಹನುಮೇಗೌಡಗೆ ಎಂಎಲ್‌ಎ, ಸಂಸದ ಮಾಡಿದ್ದು ಕಾಂಗ್ರೆಸ್ ಎಂಬುದನ್ನು ಮರೆಯಬಾರದು, ಅವರಿಗೆ ಶುಭವಾಗಲಿ. ಎಲ್ಲ ಮುಖಂಡರು ಪಕ್ಷಕ್ಕಾಗಿ ದುಡಿಯಬೇಕು ಇಲ್ಲದಿದ್ದರೆ ಬಸ್, ಲಾರಿ, ರೈಲುಗಳಿವೆ ಯಾರು ಬೇಕಾದರೂ ಎಲ್ಲಿಗಾದರೂ ಹೋಗಬಹುದು ತೆರಳಬಹುದು ಎಂದರು.