ಜಿಲ್ಲೆಯಲ್ಲಿ 2 ಹಂತದ ಗ್ರಾಪಂ ಚುನಾವಣೆ ತುಮಕೂರು, ಕುಣಿಗಲ್, ಗುಬ್ಬಿ, ಕೊರಟಗೆರೆ, ಪಾವಗಡ ಮೊದಲ ಹಂತದ ಚುನಾವಣೆ !

Voting
Published on

ತುಮಕೂರು: ಹಳ್ಳಿಫೈಟ್‌ಗೆ ಅಖಾಡ ಸಿದ್ಧವಾಗಿದೆ. ಜಿಲ್ಲೆಯಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದ್ದು ಡಿ.22 ರಂದು ಮೊದಲ ಹಂತದಲ್ಲಿ 168 ಗ್ರಾಪಂಗಳಿಗೆ ಹಾಗೂ ಡಿ.27ರಂದು ಎರಡನೇ ಹಂತದಲ್ಲಿ 161 ಗ್ರಾಂಪಗಳಿಗೆ ಚುನಾವಣೆ ನಡೆಯಲಿದೆ.

ಮೊದಲ ಹಂತದಲ್ಲಿ ತುಮಕೂರು ತಾಲೂಕಿನ 41 ಗ್ರಾಪಂ, ಕುಣಿಗಲ್ -36, ಗುಬ್ಬಿ-34, ಕೊರಟಗೆರೆ-24 ಹಾಗೂ ಪಾವಗಡ-33 ಗ್ರಾಪಂಗಳಿಗೆ ಡಿ.22 ರಂದು ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಮಧುಗಿರಿ-39, ಶಿರಾ-42, ತಿಪಟೂರು-26, ತುರುವೇಕೆರೆ-27, ಚಿಕ್ಕನಾಯಕನಹಳ್ಳಿ-27 ಗ್ರಾಪಂಗಳಿಗೆ ಡಿ.27ರಂದು ಮತದಾನ ನಡೆಯಲಿದೆ.

ಒಟ್ಟು 329 ಗ್ರಾಪಂಗಳಿಗೆ ಚುನಾವಣೆ ನಡೆಯಲಿದ್ದು 2431 ಮೂಲ ಮತಗಟ್ಟೆಗಳು ಹಾಗೂ ಆಕ್ಸಿಲರಿ ಮತಗಟ್ಟೆಗಳು 249 ಸೇರಿ ಒಟ್ಟು 2680 ಮತಗಟ್ಟೆಗಳನ್ನು ಈ ಬಾರಿ ಸ್ಥಾಪಿಸಲಾಗುವುದು. ಪುರಷರು 872250, ಮಹಿಳೆಯರು 853731 ಹಾಗೂ ಇತರೆ 89 ಸೇರಿ ಒಟ್ಟು 1726070 ಮತದಾರರು ಹಕ್ಕು ಹೊಂದಿದ್ದಾರೆ.

ಮೊದಲ ಹಂತಕ್ಕೆ ಡಿ.7ರಂದು ಅಧಿಸೂಚನೆ ಹೊರಡಿಸಲಿದ್ದು ಡಿ.11ನಾಮಪತ್ರ ಸಲ್ಲಿಸಲು ಕೊನೆ ದಿನ. ಡಿ.12 ರಂದು ನಾಮಪತ್ರ ಪರಿಶೀಲನೆ, 14ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ. ಅವಶ್ಯವಿದ್ದಲ್ಲಿ ಡಿ.22 ರಂದು ಮತದಾನ ಇರಲಿದೆ. ಎರಡನೇ ಹಂತದ ಚುನಾವಣೆಗೆ ಡಿ.11 ರಂದು ಅಧಿಸೂಚನೆ ಹೊರಡಿಸಲಿದ್ದು 16ನಾಮಪತ್ರ ಸಲ್ಲಿಸಲು ಕೊನೆದಿನ. 17 ನಾಮಪತ್ರ ಪರಿಶೀಲನೆ, 19ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. 27ರಂದು ಮತದಾನ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net