

ತುಮಕೂರು: ಜಂಬೂಸವಾರಿಗೆ ಮೆರಗು ನೀಡಲು ಮೈಸೂರಿನ ಕರ್ನಾಟಕ ಪೊಲೀಸ್ ಸಶಸ್ತ್ರ ಅಶ್ವಾರೋಹಿ ದಳ ಸೇರಿಕೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಎಎಸ್ಪಿ ವಿ.ಮರಿಯಪ್ಪ, ಅಬ್ದುಲ್ ಖಾದರ್, ನಗರ ಡಿವೈಎಸ್ಪಿ ಚಂದ್ರಶೇಖರ್ ಗುರುವಾರ ಕುದುರೆ ಏರಿ ನಗರದಲ್ಲಿ ಪ್ರದಣೆ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಅಶ್ವಾರೋಹಿ ದಳದ ಪಥಸಂಚಲನವನ್ನು ಸಾರ್ವಜನಿಕರು ಕುತೂಹಲದಿಂದ ವೀಸಿದರು.
ವಿಂಟೇಜ್ ಕಾರು ಪ್ರದರ್ಶನ
ತುಮಕೂರು ದಸರಾ ಉತ್ಸವಕ್ಕೆ ವಿಂಟೇಜ್ ಕಾರುಗಳ ಸಂಭ್ರಮ ಇರಲಿದೆ. 35 ವಿಂಟೇಜ್ ಕಾರುಗಳಿಗೆ ವಿಧಾನಸೌಧದ ಮುಂಭಾಗದಲ್ಲಿ ಅ.11 ಬೆಳಿಗ್ಗೆ 7-.30ಕ್ಕೆ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಡಾ.ಎಚ್.ಡಿ.ರಂಗನಾಥ್ ಚಾಲನೆ ನೀಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ವಿಭಾಗದ ಜಂಟಿ ಸಾರಿಗೆ ಆಯುಕ್ತ ಎನ್.ಜಿ. ಗಾಯಿತ್ರಿದೇವಿ, ಕರ್ನಾಟಕ ವಿಂಟೇಜ್ ಆಂಡ್ ಕ್ಲಾಸಿಕ್ ಕಾರ್ ಕ್ಲಬ್ ಅಧ್ಯಕ್ಷ ಬಾಲ್ ಚಂದ್ ಎ ಯಡ್ಲಾಂ, ಉಪಾಧ್ಯಕ್ಷ ಪಿ.ಎ. ಸುರೇಶ್ ಮತ್ತು ಕಾರ್ಯದರ್ಶಿ ಟಿ.ಆರ್. ರಘುನಂದನ್ ಉಪಸ್ಥಿತರಿರುವರು.
ಈ ವಿಂಟೇಜ್ಗಳ ಕಾರುಗಳ ಪ್ರದರ್ಶನವನ್ನು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದೆ.