

ತುಮಕೂರು: ಕುಣಿಗಲ್‌ಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾರ್ಯಕರ್ತರ ಮೇಲೆ ಗರಂ ಆಗಿದ್ದಾರೆ.
ಸತತ ಮೂರು ಸೋಲು ಕಂಡಿರುವ ಡಿ.ಕೃಷ್ಣಕುಮಾರ್‌ಗೆ ಈ ಬಾರಿಯೂ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ ಕಾರ್ಯಕರ್ತರಿಗೆ ವಾರ್ನಿಂಗ್ ಕೂಡ ಮಾಡಿದ್ದಾರೆ. ಅಸೆಂಬ್ಲಿ ಟಿಕೆಟ್ ಬೀದಿಯಲ್ಲಿ ನಿರ್ಧರಿಸುವುವಂತದಲ್ಲ ಎಂದು ಕಿವಿಹಿಂಡಿದ್ದಾರೆ.
ವಿಧಾನಸಭೆ ಚುನಾವಣೆ ಸಂಬಂಧ ಪಕ್ಷದಿಂದ ಸರ್ವೆ ಮಾಡಲಾಗುತ್ತದೆ, ಯಾರಿಗೆ ಜನಾಭಿಪ್ರಾಯ, ಕಾರ್ಯಕರ್ತರ ಬೆಂಬಲವಿದೆ ಎಂದು ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುತ್ತದೆ, ಇದು ಬೀದಿನಲ್ಲಿ ತೀರ್ಮಾನ ಮಾಡುವಂತದಲ್ಲ ಎಂದರು.
ನಿಮ್ಮ ಪೌರುಷವನ್ನು ಕಳೆದ ಮೂರು ಚುನಾವಣೆಯಲ್ಲೂ ನೋಡಿದ್ದೇನೆ, 30 ವರ್ಷದಿಂದ ಕೃಷ್ಣಕುಮಾರ್ ಜನರ ಮಧ್ಯ ಇದ್ದಾರೆ ಆದರೆ, ಆರು ತಿಂಗಳ ಹಿಂದೆ ಬಂದ ಕಾಂಗ್ರೆಸ್ ಅಭ್ಯರ್ಥಿ 2018ರಲ್ಲಿ ಹೇಗೆ ಗೆಲುವು ಸಾಧಿಸಿದರು ಎಂದು ಕಾರ್ಯಕರ್ತರಿಗೆ ಮರು ಪ್ರಶ್ನೆ ಹಾಕಿರುವುದು ಕ್ಷೇತ್ರದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಪಕ್ಷದಲ್ಲಿ ಸಂಸದೀಯ ಮಂಡಲಿ ಇದೆ ಅದು ತೀರ್ಮಾನ ಕೈಗೊಳ್ಳುತ್ತದೆ, ಈ ಭಾರಿ ಕುಣಿಗಲ್‌ನಲ್ಲಿ ಸೋಲುವ ಮಾತೇ ಇಲ್ಲ ಎಂದು ಕಾರ್ಯಕರ್ತರ ಬಾಯಿ ಮುಚ್ಚಿಸಿದ್ದಾರೆ.