

ತುಮಕೂರು: 2014ರಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಪ್ರಚಾರ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡಗೆ ಅಧಿಕ ಮತ ಕೊಡಿಸಿ ಗೆಲ್ಲಿಸಿದ್ದೆ ಆದರೆ, ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಈಗ ಇಂಗು ತಿಂದ ಮಂಗನAತಾಗಿದ್ದಾರೆ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದರು.
ಚಿಕ್ಕನಾಯಕನಹಳ್ಳಿಯಲ್ಲಿ ಪಕ್ಷದ ಅಭ್ಯರ್ಥಿ ಕೆ.ಎಸ್.ಕಿರಣ್‌ಕುಮಾರ್ ಪರವಾಗಿ ಪ್ರಚಾರ ನಡೆಸಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು.
ಕುಣಿಗಲ್‌ನಲ್ಲಿ ಟಿಕೆಟ್ ಸಿಗುತ್ತೆ ಎಂದು ಬಿಜೆಪಿಗೆ ಹೋದರು ಬಿಜೆಪಿಯವರು ತಿರುಪತಿ ನಾಮ ಹಾಕಿದ್ದಾರೆ. ನಾನು ಎಂಪಿಗೆ ನಿಲ್ಲಿ ಅಥವಾ ತುಮಕೂರು ಗ್ರಾಮಾಂತರದಲ್ಲಿ ನಿಲ್ಲಿ ಎಂದು ಸಲಹೆ ನೀಡಿದ್ದೇ ಆದರೆ, ಕುಣಿಗಲ್ ಟಿಕೆಟ್ ಬಯಸಿ ಹೋಗಿ ಮಂಗನಾಗಿದ್ದಾರೆ ಎಂದರು.