

ಚಿಕ್ಕನಾಯಕನಹಳ್ಳಿ: ತಾಲೂಕಿನ ಕಂದಿಕೆರೆ ಹೋಬಳಿಯ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಪರವಾಗಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಪ್ರಚಾರ ನಡೆಸಿದರು.
ಕಾಯಿತಿಮ್ಮನಹಳ್ಳಿ, ಬಡಕೆಗುಡ್ಲು, ರಾಮನಹಳ್ಳಿ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ್ ಎಂ.ಗೌಡ ಸಾಥ್ ನೀಡಿದರು.
ಮುದ್ದಹನುಮೇಗೌಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನರ ಕಲ್ಯಾಣಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದು ಗ್ರಾಮೀಣ ಭಾಗದಲ್ಲಿನ ಸರ್ವತೋಮುಖ ಅಭಿವೃದ್ಧಿಗೆ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಬೇಕು ಎಂದರು.
ಮೀಸಲಾತಿ ಸೇರಿದಂತೆ ರಾಜ್ಯ ಸರ್ಕಾರದ ಪ್ರಮುಖ ರಾಜಕೀಯ ನಿರ್ಧಾರದ ಹಿಂದೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಕೊಡುಗೆಯೂ ಇದೆ. ಯಾವುದೇ ತೊಂದರೆಯಾಗದAತೆ ಜಿಲ್ಲೆಯಲ್ಲಿ ಹೇಮಾವತಿ ನೀರು ಹರಿಸಿದ ಕೀರ್ತಿ ಜೆಸಿಎಂಗೆ ಸಲ್ಲಬೇಕು ಎಂದರು.
ಜಿಪA ಮಾಜಿ ಸದಸ್ಯೆ ಮಂಜುಳಮ್ಮ, ಬಿ.ಕೆ.ಕೇಶವಮೂರ್ತಿ, ಮುಖಂಡರಾದ ಉಮೇಶ್, ಧನಂಜಯ್, ಸಿಂಗದಹಳ್ಳಿ ಉಮೇಶ್, ರಾಮಚಂದ್ರಯ್ಯ, ನಂಜುAಡಯ್ಯ, ರಾಘವೇಂದ್ರ, ಮಂಜುನಾಥ್, ಬಸವರಾಜು ಮತ್ತಿತರರು ಇದ್ದರು.