ಸಿಎಂ ಆಪ್ತ ಸಚಿವ ಸಿ.ಸಿ.ಪಾಟೀಲ ತುಮಕೂರಲ್ಲಿ ತುರ್ತು ಸುದ್ದಿಗೋಷ್ಠಿ

CC Patil
Published on

ತುಮಕೂರು: ಶೀಘ್ರದಲ್ಲಿಯೇ ರಾಜ್ಯಕ್ಕೆ ಬಿಜೆಪಿ ಮೂರನೇ ಸಿಎಂ ಬರಲಿದ್ದಾರೆ ಎಂದು ಕಾಂಗ್ರೆಸ್ ಟ್ವಿಟ್‌ನಲ್ಲಿ ಯಾವುದೇ ಹುರುಳಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಸ್ಪಷ್ಟಪಡಿಸಿದರು.

ನಗರದಲ್ಲಿ ಇಂದು ದಿಢೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯೊಂದು ಮೂರು ಬಾಗಿಲು ಎಂತಾಗಿರುವ ಕಾಂಗ್ರೆಸ್ ಮುಖಂಡರು ಸಿಎಂ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡಲಾರಂಭಿಸಿದ್ದಾರೆ ಎಂದು ಹರಿಹಾಯ್ದರು.

ಬಿಎಸ್‌ವೈ ಅವರಂತೆಯೇ ಬಡವರ ಪರವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಬೊಮ್ಮಾಯಿ ಘೋಷಿಸಿ ಒಳ್ಳೆಯ ಆಡಳಿತ ನೀಡುತ್ತಿರುವ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ನಿಲ್ಲಿಸಬೇಕು ಎಂದರು.

ಸಿಎA ಬದಲಾವಣೆ ನೂರಕ್ಕೆ ನೂರರಷ್ಟು ಸುಳ್ಳು, ಕಾಂಗ್ರೆಸ್ ವದಂತಿಗೆ ಯಾರೂ ಕಿವಿಗೊಡಬಾರದು. ಸಚಿವ ಸಂಪುಟದ ಸಹದ್ಯೋಗಿಯಾಗಿ ಜವಬ್ಧಾರಿಯಿಂದ ನಾನು ಹೇಳಿಕೆ ನೀಡುತ್ತಿz್ದೆÃನೆ ಸಿಎಂ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.

ಕೇAದ್ರ ಗೃಹ ಸಚಿವ ಅಮಿತ್‌ಶಾ ರಾಜ್ಯ ಭೇಟಿಯ ನಂತರ ಎಂದು ಕಾಂಗ್ರೆಸ್ ಟ್ವಿಟ್‌ನಲ್ಲಿ ಉಲ್ಲೇಖಿಸುತ್ತಿದೆ ಆದರೆ, ನಾವು ಕ್ಷೇತ್ರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಕಡೆ ಗಮನ ನೀಡಿದ್ದು ಕಾಂಗ್ರೆಸ್ ಅಪಪ್ರಚಾರದಲ್ಲಿ ತೊಡಗಿದೆ ಎಂದರು.

2023ರ ಚುನಾವಣೆ ಕೂಡ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದ್ದು ಪಕ್ಷ ಮತ್ತೊಮ್ಮೆ ಅಧಿಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಜತೆಗಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಷ್ಟç ಧ್ವಜದ ಬಣ್ಣ ಹೇಳಲೂ ಬರೋದಿಲ್ಲ, ಎರಡು ಬಣ್ಣವನ್ನಾದರೂ ಸರಿಯಾಗಿ ತಿಳಿದುಕೊಂಡಿದ್ದಾರೆ. ಕೇಸರಿ ಅಂದರೆ ಅವರಿಗೆ ವಾಕರಿಕೆ, ಹಿಂದೂ ಎಂದರೂ ಅವರಿಗೂ ವಾಕರಿಕೆ. ಸಿದ್ಧರಾಮೋತ್ಸವಕ್ಕೆ ಬಿಜೆಪಿ ಹೆದರುವ ಪ್ರಶ್ನೆಯೇ ಇಲ್ಲ.
ಸಿ.ಸಿ.ಪಾಟೀಲ
ಲೋಕೋಪಯೋಗಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net