

ತುಮಕೂರು: ಮದ್ಯಪಾನ ಮಾಡಲೆಂದು ಬಾರ್ಗೆ ಹೋದ ವ್ಯಕ್ತಿಯನ್ನು ಬಾರ್ ಎದುರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ. ಇದೀಗ ಕೊಲೆ ಮಾಡಿದ ಆರೋಪಿಗಳು ಪೊಲೀಸರ ವಶವಾಗಿದ್ದಾರೆ.
ಸುನೀಲ್ ಪ್ರಸಾದ್(೪೦) ಕೊಲೆಯಾದ ದುರ್ದೈವಿ. ಸುನಿಲ್ನನ್ನು ಜನವರಿ 15ರಂದು ಚಿಲ್ಲೋಟ್ ಬಾರ್ ಎದುರು ತಲೆ ಮೇಲೆ ಸಿಮೆಂಟ್ ಬ್ಲಾಕ್ ಎತ್ತಾಕಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಅಘಾತಕಾರಿ ವಿಚಾರ ತಿಳಿದುಬಂದಿದೆ. ಮೃತನ ಪತ್ನಿಯೇ ಗಂಡನ ಕೊಲೆ ಮಾಡಿಸಿರುವುದಾಗಿ ತಿಳಿದುಬಂದಿದೆ.