More

    ಡ್ರ್ಯಾಗನ್​ಫ್ರುಟ್​ ಈಗ ‘ಕಮಲಂಫ್ರುಟ್​’ ಮರುನಾಮಕರಣಕ್ಕೆ ಕಾರಣ ಏನು ಗೊತ್ತಾ?

    ಅಹಮದಾಬಾದ್: ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ತಮ್ಮ ಮನ್​​ ಕೀ ಬಾತ್​ ಕಾರ್ಯಕ್ರಮದಲ್ಲಿ ಡ್ರ್ಯಾಗನ್​ ಫ್ರೂಟ್​ ಬಗ್ಗೆ ಮಾತನಾಡಿದ್ದರು. ಇದಕ್ಕೆ ಕಾರಣ, ಕಳೆದ ಕೆಲವು ವರ್ಷಗಳಲ್ಲಿ ಈ ಹಣ್ಣು ಗುಜರಾತ್​ನ ಆಹಾರದ ಭಾಗವೆನಿಸಿದೆ. ರಾಜ್ಯದ ಭುಜ್​, ಗಾಂಧಿಧಾಮ್ ಹಾಗೂ ಮಾಂಡ್ವಿಯಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

    ಅಮೆರಿಕ ಮೂಲದ ಈ ಹಣ್ಣನ್ನು ಕಚ್​​ನ ರೈತರು ಕೂಡ ಬೆಳೆಯುತ್ತಿರುವುದಕ್ಕೆ ಪ್ರಧಾನಿ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದರು. ಗುಜರಾತ್​ ಮಾತ್ರವಲ್ಲದೇ, ದೇಶದಲ್ಲಿ ಕೆಲವು ವರ್ಷಗಳಿಂದೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಈ ಹಣ್ಣಿಗೆ ಈಗ ಗುಜರಾತ್ ಸರ್ಕಾರ ಮರು ನಾಮಕರಣ ಮಾಡಿದೆ.

    ಮಂಗಳವಾರ ಗುಜರಾತ್ ನಲ್ಲಿ ಸಿಎಂ ತೋಟಗಾರಿಕಾ ಅಭಿವೃದ್ಧಿ ಕಾರ್ಯಸೂಚಿ ಬಿಡುಗಡೆ ಮಾಡಿದ ಗುಜರಾತ್ ಮುಖ್ಯಮಂತ್ರಿ ವಿಜಯನ್ ರೂಪಾಣಿ ಡ್ರ್ಯಾಗನ್ ಫ್ರೂಟ್‌ಗೆ ಹೊಸ ಹೆಸರಿಟ್ಟಿರುವುದಾಗಿ ಹೇಳಿದ್ದಾರೆ. ಹೆಸರು ಬದಲಾವಣೆಗೆ ಪೇಟೆಂಟ್ ಪಡೆಯಲು ಅರ್ಜಿ ಕೂಡ ಸಲ್ಲಿಸಲಾಗಿದೆ. ಆದರೆ ಇನ್ನು ಮುಂದೆ ಗುಜರಾತ್ ನಲ್ಲಿ ಇದಕ್ಕೆ “ಕಮಲಂ” ಎಂದೇ ಕರೆಯುತ್ತೇವೆ ಎಂದಿದ್ದಾರೆ.

    ಅಂದಹಾಗೆ ಇದಕ್ಕೆ ಇಟ್ಟಿರುವ ಹೊಸ ಹೆಸರು ಕಮಲ್​ ಫ್ರೂಟ್​. ಡ್ರ್ಯಾಗನ್ ಎಂದರೆ ಮೊದಲಿಗೆ ನೆನಪಿಗೆ ಬರುವುದು ಡ್ರ್ಯಾಗನ್​ ಲಾಂಛನ ಇರುವ ದೇಶ, ಅದುವೇ ಚೀನಾ. ಇದೀಗ ಚೀನಾದ ವಸ್ತುಗಳನ್ನು ಬಹಿಷ್ಕಾರ ಹಾಕುತ್ತಿರುವ ಭಾರತಕ್ಕೆ ಅದೇ ದೇಶದ ಹೆಸರಿನ ಹಣ್ಣಿನ ಹೆಸರು ಕೂಡ ಬದಲಾಯಿಸಬೇಕು ಎನಿಸಿ ಕಮಲಂ ಎಂದು ಮರುನಾಮಕರಣ ಮಾಡಿದೆ.

    ಅಷ್ಟಕ್ಕೂ ಕಮಲದ ಹಣ್ಣಿಗೂ ಬಿಜೆಪಿಯ ಗುರುತು ಕಮಲಕ್ಕೂ ಯಾವುದೇ ಸಂಬಂಧ ಇದ್ದಂತಿಲ್ಲ. ಇದಕ್ಕೆ ಕಾರಣ, ಇದಕ್ಕೆ ಕಮಲದ ಹಣ್ಣು ಎಂದು ಹೆಸರು ಇಡಲು ಕಾರಣವನ್ನೂ ಸರ್ಕಾರ ನೀಡಿದೆ. ಈ ಹಣ್ಣು ಥೇಟ್​ ಕಮಲದ ಹೂವನ್ನು ಹೋಲುತ್ತದೆ. ಕಮಲಂ ಎಂದರೆ ಸಂಸ್ಕೃತದಲ್ಲಿ ಕಮಲ ಎಂದು. ಈಚಿನ ವರ್ಷಗಳಲ್ಲಿ ಡ್ರ್ಯಾಗನ್ ಫ್ರೂಟ್ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿದೆ.

    ತನ್ನ ಭಿನ್ನ ನೋಟ ಹಾಗೂ ರುಚಿಯಿಂದ ಈ ಹಣ್ಣು ಗಮನ ಸೆಳೆದಿದೆ. ಹೀಗಾಗಿ ಹಣ್ಣಿನ ಹೆಸರನ್ನು ಬದಲಿಸಲು ತೀರ್ಮಾನಿಸಲಾಗಿದೆ. ಈ ಹೆಸರಿನ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಆದರೂ ಈ ಹೆಸರೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಬೆಂಗಳೂರು ಲಾಕ್​ ಮಾಡಿದ ‘ಕೈ’ ಪಡೆ- ಪ್ರತಿಭಟನಾಕಾರರಿಗೆ ಡಿಕೆಶಿ ಕೊಟ್ಟರೊಂದು ‘ಟಿಪ್ಸ್​’

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts