

ತುಮಕೂರು: ಸಾಮಾನ್ಯವಾಗಿ ಬಾಳೆ 30ರಿಂದ 40 ಕೆಜಿ ಗೊನೆ ಬಿಡುವುದು ಸಾಮಾನ್ಯ ಆದರೆ, ಇಲ್ಲೊಬ್ಬ ಪ್ರಗತಿಪರ ರೈತರ ತೊಟದಲ್ಲಿದ್ದ ಬಾಳೆ ಬರೋಬ್ಬರಿ 72ಕೆಜಿಯ ಕೊನೆ ಬಿಟ್ಟಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಬಡಕೆಗುಡ್ಲು ಪ್ರಗತಿಪರ ರೈತ ಲೋಕೇಶ್ ಅವರು ತೋಟದಲ್ಲಿ ಬೆಳೆದಿರುವ ಜಿ.9 ಅಂಗಾಶ ಕೃಷಿ ಬಾಳೆ ಬರೋಬ್ಬರಿ 70ಕೆಜಿ ಗೊನೆ ಬಿಟ್ಟಿದೆ.
ಬಾಳೆಗಿಡದಿಂದ ಕೂಯ್ದ ಕೊನೆಯನ್ನು ಒಬ್ಬರು ಹೊರಲಾರದೆ ಇಬ್ಬರು ಹೊತ್ತುಕೊಂಡು ಬಂದಿದ್ದು ವಿಶೇಷ ಎನ್ನಿಸಿತು.