

ತುಮಕೂರು: ಶಿರಾ ತಾಲೂಕು ತರೂರು ಗೇಟ್‌ನಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಬೀಕರ ಕಾರು ಅಪಘಾತದಲ್ಲಿ ತಂದೆ, ಮಗಳು ಸೇರಿ ಒಟ್ಟು ಮೂವರು ಸಾವನ್ನಿಪ್ಪಿರುವ ಘಟನೆ ನಡೆದಿದೆ.
ಕಡವಗೆರೆಯ ಅವಿನಾಶ್(28), ಅವರ ಪುತ್ರಿ ಐದು ವರ್ಷದ ಪ್ರಣತಿ ಹಾಗೂ ಸಂಭದಿಕರ ಮಗಳ ಸೌಖ್ಯ(4) ಮೃತರು. ತರೂರು ಗೇಟ್‌ನಿಂದ ತುಮಕೂರಿಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣತಪ್ಪಿ ಡಿವೈಡರ್‌ಗೆ ಡಿಕ್ಕಿಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ