ತುಮಕೂರಿಗೆ ರಾಷ್ಟ್ರೀಯ ಏಕಾತ್ಮತಾ ಯಾತ್ರೆ

834564d6-7eac-4ad7-96b6-a55fb47d7a62
Published on

ತುಮಕೂರು: ಅಂತರರಾಜ್ಯ ವಿದ್ಯಾರ್ಥಿ ಅನುಭವವನ್ನು ಪಡೆದುಕೊಳ್ಳುವ ಉದ್ದೇಶದಿಂದ ಎಬಿವಿಪಿ ವತಿಯಿಂದ ಆಯೋಜಿಸುತ್ತಿರುವ ರಾಷ್ಟ್ರೀಯ ಏಕಾತ್ಮತಾ ಯಾತ್ರೆ ಬುಧವಾರ ತುಮಕೂರಿಗೆ ಆಗಮಿಸಲಿದೆ ಎಂದು ಸ್ವಾಗತ ಸಮಿತಿ ಸದಸ್ಯ ಟಿ.ಎಸ್.ಸುನೀಲ್‌ಪ್ರಸಾದ್ ತಿಳಿಸಿದ್ದಾರೆ.

ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಜಿಲ್ಲೆಗೆ ಭೇಟಿ ನೀಡಲಿದ್ದು ಸ್ಥಳೀಯ ಕುಟುಂಬಗಳಲ್ಲಿ ವಾಸ್ತವ್ಯವಿದ್ದು ಇಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನಾನುಭವ ಪಡೆದುಕೊಳ್ಳುವುದರ ಮೂಲಕ ನಾವೆಲ್ಲರೂ ಭಾರತೀಯರು ಎನ್ನುವುದನ್ನು ಅರಿಯುತ್ತಾರೆ ಎಂದು ತಿಳಿಸಿದ್ದಾರೆ.

800ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಪ್ರವಾಸ ಬಂದಿದ್ದು ಅವರಲ್ಲಿ 35 ವಿದ್ಯಾರ್ಥಿಗಳು ತುಮಕೂರಿಗೆ ಆಗಮಿಸಲಿದ್ದಾರೆ ಎಂದರು.

ರಾಷ್ಟ್ರೀಯ ಏಕಾತ್ಮತಾ ಯಾತ್ರೆ ಇಂದು ಬೆಳಗ್ಗೆ 10.30ಕ್ಕೆ ತುಮಕೂರು ತಲುಪಲಿದೆ. ತುಮಕೂರು ವಿವಿ ಮುಖ್ಯದ್ವಾರದಲ್ಲಿ ಸ್ವಾಗತ ಸಮಿತಿ ಸದಸ್ಯರು ಹಾಗೂ ವಿವಿ ಕುಲಪತಿ ಸ್ವಾಗತಿಸಲಿದ್ದಾರೆ. ಸಾಂಸ್ಕೃತಿಕ ಕಲಾತಂಡಗಳ ಮೂಲಕ ಅವರನ್ನು ಸಭಾಂಗಣಕ್ಕೆ ಕರೆತರಲಾಗುವುದು.
ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಮತ್ತು ತುಮಕೂರು ವಿವಿ ವಿದ್ಯಾರ್ಥಿಗಳೊಟ್ಟಿಗೆ ಮಧ್ಯಾಹ್ನ 11 ರಿಂದ 12.30ರ ವರೆಗೆ ಸಂವಾದ ಕಾರ್ಯಕ್ರಮ ನಡೆಸಿಕೊಡುವರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಆಚಾರ್ಯ ಗಿರಿರಾಜ್ ಕಿಶೋರ್ ಅಧ್ಯಕ್ಷತೆಯಲ್ಲಿ 1965ರಲ್ಲಿ ಎಸ್‌ಇಐಎಲ್ (ಸ್ಟೂಡೆಂಟ್ಸ್ ಎಕ್ಸಪಿರಿಯನ್ಸ್ ಇನ್ ಇಂಟರ್-ಸ್ಟೇಟ್ ಲಿವಿಂಗ್) ಅನ್ನು ಸ್ಥಾಪಿಸಲಾಯಿತು. ಈ ಕಾರ್ಯಕ್ರಮದ ಮೂಲಕ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಮತ್ತು ದೇಶದ ಇತರೆ ಭಾಗದ ವಿದ್ಯಾರ್ಥಿಗಳಲ್ಲಿ ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದು ಎನ್ನುವ ಭಾವವನ್ನು ಮೂಡಿಸಲು ಅಂತರರಾಜ್ಯ ವಿದ್ಯಾರ್ಥಿ ಅನುಭವವನ್ನು ಪಡೆದುಕೊಳ್ಳಲು ಅನೇಕ ವರ್ಷಗಳಿಂದ ರಾಷ್ಟ್ರೀಯ ಏಕಾತ್ಮತಾ ಯಾತ್ರೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net