

ತುಮಕೂರು: ಮಂಗಳೂರು ಕುಕ್ಕರ್ ಸ್ಪೋಟ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ನಿರೀಕ್ಷಿತವಾಗಿದ್ದು, ಅಲ್ಪಸಂಖ್ಯಾತರ ತುಷ್ಟೀಕರಣದ ಮಾಡುವುದನ್ನು ಕಾಂಗ್ರೆಸ್ ಮೊದಲಿನಿಂದಲೂ ಮಾಡಿಕೊಂಡು ಬಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿಕೆಶಿ ಹಾಗೂ ಕಾಂಗ್ರೆಸ್ ದೇಶದಲ್ಲಿ ಇದನ್ನೇ ಮಾಡಿಕೊಂಡು ಬಂದಿದ್ದಾರೆ, ಅಲ್ಪಸಂಖ್ಯಾತರನ್ನು ಓಲೈಸಿಕೊಂಡು ಅವರ ಮತಪಡೆಯುವುದೇ ಅವರ ಗುರಿ ಎಂದು ದೂರಿದರು.
ಮಂಗಳೂರಿನಲ್ಲಿ ಸಿಕ್ಕಿಬಿದ್ದರುವ ಆರೋಪ ಈ ಹಿಂದೆಯೂ ಹಲವು ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ, ಜಾಮೀನಿನ ಮೇಲೆ ಹೊರಗೆ ಬಂದಿದ್ದವನು ಶಿವಮೊಗ್ಗ ಸ್ಫೋಟದಲ್ಲಿಯೂ ಭಾಗಿಯಾಗಿದ್ದಾನೆ, ದಾಳಿಯ ಸಂದರ್ಭದಲ್ಲಿ ಅವರ ಮನೆಯಲ್ಲಿ ಬಾಂಬ್ ತಯಾರಿಸುವ ವಸ್ತುಗಳು ಸಿಕ್ಕಿವೆ ಎಂದರು.
ಆರೋಪಿಗೆ ಭಯೋತ್ಪಾದಕರ ಜತೆ ಇರುವ ನಂಟಿನ ಬಗ್ಗೆ ಡಿಜಿಪಿ ಮಾಡಿರುವ ಟ್ವಿಟ್ ಸತ್ಯವಾಗಿದೆ ಅದರ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್ ಆರೋಪಿಯ ಪರವಾಗಿದ್ದು ಕೀಳುಮಟ್ಟದ ರಾಜಕೀಯಕ್ಕೆ ಮುಂದಾಗಿದ್ದಾರೆ ಎಂದು ಹರಿಹಾಯ್ದರು.
ಕೆಪಿಸಿಸಿ ಅಧ್ಯಕ್ಷರಾಗಿ ಬೇಜವಬ್ಧಾರಿ ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಯದ ಜನರೇ ಕ್ರಮಜರುಗಿಸುತ್ತಾರೆ, ಕಾಂಗ್ರೆಸ್‌ನವರಿಗೆ ಜನರ ನೆಮ್ಮದಿಗಿಂತಲೂ ಅವರ ಖರ್ಚಿ ಮುಖ್ಯ ಎಂದು ಟೀಕಿಸಿದರು.