ಆಂಬುಲೆನ್ಸ್ ಸೇವೆಗೆ 108 ಬದಲಾಗಿ ಮೊಬೈಲ್‌ಗೆ ಕರೆ ಮಾಡಿ

108 web
Published on

ತುಮಕೂರು: 108 ಆಂಬ್ಯುಲೆನ್ಸ್ ಉಚಿತ ಕರೆ ಸೇವೆಯ ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿರುವುದು ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಪರ್ಯಾಯ ಮೊಬೈಲ್ ಸಂಖ್ಯೆಗಳನ್ನು ಪ್ರಕಟ ಮಾಡಿದೆ.

ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ತುರ್ತು ಕರೆಗಳನ್ನು ಸ್ವೀಕರಿಸಲು ಪರ್ಯಾಯ ನಂಬರ್ ನೀಡಲಾಗಿದ್ದು ಆಂಬುಲೆನ್ಸ್ ಸೇವೆ ಅಗತ್ಯವಿರುವವರು ಸಂಪರ್ಕಿಸಬಹುದು.

ಉಚಿತ ಆಂಬುಲೆನ್ಸ್ ಸೇವೆಗಾಗಿ 90087 82366, 86609 31009, 99013 22235 ಸಂಪರ್ಕಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net