ಮುನಿಸು ಮರೆತು ಒಂದಾದ 5 ಜೋಡಿ

court
Published on

ತುಮಕೂರು: ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 5 ದಂಪತಿ ನ್ಯಾಯಾಧೀಶರು, ವಕೀಲರ ಸಲಹೆಯಂತೆ ತಮ್ಮ ಅರ್ಜಿಯನ್ನು ಹಿಂಪಡೆದು ಒಂದಾದರು.

ಶನಿವಾರ ನಡೆದು ಲೋಕ್ ಅದಾಲತ್‌ನಲ್ಲಿ ನಡೆದ ರಾಜಿ ಸಂಧಾನದಲ್ಲಿ ಭಾಗಿಯಾಗಿದ್ದ ದಂಪತಿಗಳು ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಮತ್ತೆ ಒಂದಾಗಿರುವುದು ಎರಡೂ ಕಡೆಯ ಕುಟುಂಬ ಸದಸ್ಯರಿಗೆ ಮತ್ತು ಅವರ ಸ್ನೇಹಿತರಿಗೆ ಸಂತಸ ಮೂಡಿಸಿತು.

ತುಮಕೂರು ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 5 ದಂಪತಿ ಲೋಕ್ ಅದಾಲತ್ ನಲ್ಲಿ ಒಂದಾಗಿರುವುದು ಎಂದು ಹಿರಿಯ ವಕೀಲರುಗಳು ಅಭಿಪ್ರಾಯಪಟ್ಟರು.

ಜಿಲ್ಲಾ ನ್ಯಾಯಾಧೀಶರಾದ ಎನ್.ಮುನಿರಾಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಆಡಳಿತ ಶಿರಸ್ತೇದಾರ್ ಎಂ.ಕೆ.ಜಗದೀಶ್, ನವೀನ್ ಕುಮಾರ್, ಗೋವಿಂದರಾಜು, ಆಡಳಿತಾಧಿಕಾರಿ ನರಸಿಂಹಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net