ಪೂರ್ಣಗೊಂಡ ಕಟ್ಟಡಕ್ಕೆ ಪ್ರಮಾಣಪತ್ರ ಇದ್ದರಷ್ಟೇ ನೀರು, ವಿದ್ಯುತ್​!

Mahanagara_Palike
Published on

ತುಮಕೂರು: ತುಮಕೂರು ಮಹಾನಗರ ಪಾಲಿಕೆಯನ್ನು ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಿಸುವವರಿಗೆ ಸ್ಥಳಿಯ ಆಡಳಿತ ಹದ್ದಿನ ಕಣ್ಣಿಟ್ಟಿದ್ದು ಕಟ್ಟಡ ವಾಸಯೋಗ್ಯ ಪ್ರಮಾಣ ಪತ್ರ ಪಡೆದ ನಂತರವಷ್ಟೇ ಅಗತ್ಯ ಸೇವೆಗಳಾದ ವಿದ್ಯುತ್​, ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕ ನೀಡಲು ಮುಂದಾಗಿದೆ.

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿಮಾರ್ಣ ಕಾಮಗಾರಿ ಪೂರ್ಣಗೊಂಡ ನಂತರ ಸ್ವಾಧಿನಾನುಭವ ಪ್ರಮಾಣ ಪತ್ರ, ವಾಸಯೋಗ್ಯ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.

ಕಟ್ಟಡದ ನಿಮಾರ್ಣದ ಮುಕ್ತಾಯ, ವಾಸಯೋಗ್ಯ ಪ್ರಮಾಣ ಪತ್ರ ಪಡೆದ ನಂತರವಷಚ್ಟೇ ವನ್ನು ನೀಡಲಾಗುವುದು. ಕಟ್ಟಡ ಮಾಲೀಕರು, ನಿಮಾರ್ಣದಾರರು ಸದರಿ ಕಟ್ಟಡದಲ್ಲಿ ಯಾವುದೇ ವ್ಯವಹಾರ, ವ್ಯಾಪಾರ ನಡೆಸಲು ಅನುಮತಿ ನೀಡದಿರಲು ನಿರ್ಧರಿಸಲಾಗಿದೆ.

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬೆಳವಣಿಗೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಸುತ್ತೋಲೆ ಹಾಗೂ ಸವೋರ್ಚ್ಛ ನ್ಯಾಯಾಲಯದ ಆದೇಶದನ್ವಯ ಯಾವುದೇ ಕಟ್ಟಡ ನಿಮಾರ್ಣದಾರರು, ಮಾಲೀಕರು ಸ್ವತ್ತಿಗೆ ಸಂಬಂಧಿಸಿದಂತೆ ಪಾಲಿಕೆಯಿಂದ ಅಗತ್ಯ ಮಂಜೂರಾತಿ ಪರವಾನಗಿ ಪಡೆದು ಅದರಂತೆ ಕಟ್ಟಡ ನಿಮಾರ್ಣ ಕೈಗೊಂಡು ಪೂರ್ಣಗೊಂಡ ನಂತರ ಸ್ವಾಧಿನಾನುಭವ ಪ್ರಮಾಣ ಪತ್ರ ಪಡೆಯಬೇಕು ಎಂದು ಸೂಚಿಸಿದ್ದಾರೆ.

ಸ್ವಾಧಿನಾನುಭವ ಪ್ರಮಾಣ ಪತ್ರ ಪಡೆದ ನಂತರವಷ್ಟೇ ಮಾಲೀಕರು. ಫಲಾನುಭವಿಯು ಕಟ್ಟಡದಲ್ಲಿ ವಾಸಿಸುವ ಬಗ್ಗೆ ಮುಚ್ಚಳಿಕೆ ಪ್ರಮಾಣ ಪತ್ರವನ್ನು ಪಾಲಿಕೆಗೆ ಸಲ್ಲಿಸತಕ್ಕದ್ದು. ಕಟ್ಟಡ ನಿಮಾರ್ಣದಾರರೂ ಸ್ವತ್ತಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಿಂದ ಮಂಜೂರಾದ ಕಟ್ಟಡ ನಕ್ಷೆಯ ಪ್ರತಿಯನ್ನು ನಿಮಾರ್ಣ ಸ್ಥಳದಲ್ಲಿ ಪ್ರದರ್ಶಿಸಬೇಕು.

ಅನುಮೋದಿತ ಕಟ್ಟಡ ನಕ್ಷೆಯನುಸಾರ ಕಟ್ಟಡ ನಿರ್ಮಿಸಿರುವ ಬಗ್ಗೆ ಮಹಾನಗರಪಾಲಿಕೆ ವಾರ್ಡ್​ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ ಕಟ್ಟಡದ ಪ್ರಾರಂಭಿಕ ತಳಪಾಯ ಹಂತ, ಬೇಸ್​ಮೆಂಟ್​ ಹಂತ ಹಾಗೂ ಛಾವಣಿ ಹಂತದಲ್ಲಿ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುತ್ತಾರೆ, ಅನುಮೋದಿತ ನಕ್ಷೆ ಉಲ್ಲಂಘಿಸಿ ನಿಮಾರ್ಣವಾಗಿದ್ದರೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಹಾಗೂ ಅಲ್ಲಿಯವರೆಗೆ ವಾಸಯೋಗ್ಯ ಪ್ರಮಾಣ ಪತ್ರ ನೀಡಲು ಅವಕಾಶವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net