ವನ್ಯಜೀವಿ ಸಪ್ತಾಹದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

Wild
Published on

ತುಮಕೂರು: ಅರಣ್ಯ ಇಲಾಖೆ ಪರಿಸರ ಆಸಕ್ತರ ಸಹಯೋಗದೊಂದಿಗೆ ಅ. 2 ರಿಂದ 8ರ ವರೆಗೆ ಹಮ್ಮಿಕೊಂಡಿರುವ ವನ್ಯಜೀವಿ ಸಪ್ತಾಹದ ಅಂಗವಾಗಿ ನೃತ್ಯ, ನಾಟಕ ಪ್ರದರ್ಶನ ಹಾಗೂ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ. ಭಾಗವಹಿಸುವವರು ಸೆ.8ರೊಳಗೆ ಹೆಸರು ನೋಂದಾಯಿಸಬಹುದು.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಹಾಗೂ ಅರಣ್ಯ ಮತ್ತು ವನ್ಯಜೀವಿಯೊಂದಿಗೆ ಸಹಬಾಳ್ವೆ ಕುರಿತು ನೃತ್ಯ, ನಾಟಕ ಪ್ರದರ್ಶನ ಹಾಗೂ ವೇಷಭೂಷಣ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನಿಗಧಿತ ದಿನಾಂಕದೊಳಗೆ ಇ-ಮೇಲ್ ಮೂಲಕ
Wildweektumakuru@gmail.com ರಲ್ಲಿ ನೋಂದಾಯಿಸಬಹುದು.

ಮಾಹಿತಿಗೆ ವಲಯ ಅರಣ್ಯಾಧಿಕಾರಿ ಮೊ. 7019173064 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net