

ತುಮಕೂರು: ಕಲುಶಿತ ನೀರು ಕುಡಿದು ಆರು ಜನರು ಸಾವನ್ನಪ್ಪುವ ಜತೆಗೆ ಕಾಲರಾ ಕೂಡ ಪತ್ತೆಯಾಗಿರುವ ಮಧುಗಿರಿ ತಾಲೂಕು ಚಿನ್ನೆನಹಳ್ಳಿಗೆ ಮಂಗಳವಾರ ಜಿಲ್ಲಾಡಳಿತ ದೌಡಾಯಿಸಿದೆ.
ಸ್ಥಳೀಯ ಶಾಸಕರೂ ಆದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರೊಂದಿಗೆ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ ಗ್ರಾಮಕ್ಕೆ ಭೇಟಿ ನೀಡಿದ್ದು. ಜಿಲ್ಲಾಧಿಕಾರಿ, ಜಿಪಂ ಸಿಇಒ ಕೂಡ ಹಾಜರಿದ್ದು ವರದಿ ಒಪ್ಪಿಸಿದರು.
ಘಟನೆಯಿಂದ ಆರು ಜನರು ಸಾವನ್ನಪ್ಪಿದ್ದಾರೆಯಾದರೂ ಜಿಲ್ಲಾಡಳಿತ ಇಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ, ಜೆತೆಗ 250ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ವಾಂತಿ ಭೇದಿ ಕಾಣಿಸಿಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಕಾಲಾರಾ ಕೂಡ ಪತೆಯಾಗಿದ್ದ ಹಿನ್ನೆಲೆಯಲ್ಲಿ ಸಚಿವರು ಚಿನ್ನೆನಹಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.