ಮಕ್ಕಳಿಗೆ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ ಗ್ರಾಮಸ್ಥರು

04TMK_MALE
Published on

ತುಮಕೂರು: ತೀವ್ರ ಬರ ಎದುರಿಸುತ್ತಿರುವ ತೆಂಗಿನ ಸೀಮೆಯ ಜನರು ಮಳೆಯಾಗಿ ಪ್ರಾರ್ಥಿಸಲು ಮೂಢನಂಬಿಕೆ ಆಯ್ಕೆ ಮಾಡಿಕೊಂಡಿದ್ದಾರೆ.

ತಿಪಟೂರು ತಾಲೂಕಿನ ಬಜಗೂರು ಗ್ರಾಮಸ್ಥರು ಮಳೆಗಾಗಿ ಹಿಂದಿನಿಂದಲೂ ಆಚರಣೆಯಲ್ಲಿರುವಂತೆ ಇಬ್ಬರು ಬಾಲಕಿಯರಿಗೆ ಗಂಡು ಹೆಣ್ಣಿನ ವೇಷಭೂಷಣ ತೊಡಿಸಿ ಮದುವೆ ಮಾಡಿ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಮಳೆ ಕೈಕೊಟ್ಟ ಸಂದರ್ಭದಲ್ಲಿ ಗ್ರಾಮದಲ್ಲಿ ಹಿಂದಿನಿಂದಲೂ ಇಂತಹ ಆಚರಣೆ ಚಾಲ್ತಿಯಲ್ಲಿದ್ದು ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದು ಮಳೆ ಬರುವ ನಂಬಿಕೆ ಇಟ್ಟುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net