

ತುಮಕೂರು: ನಗರ ಪೊಲೀಸ್ ಠಾಣೆ ವ್ಯಾಪ್ತಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ 3ನೇ ಮಹಡಿಯಲ್ಲಿ ಮಾ.27ರಂದು ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ.
ಮೃತನು 165 ಸೆಂ.ಮೀ. ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಬಲ ಕಣಕೈಯಲ್ಲಿ ಆಂಜನೇಯನ ಹಚ್ಚೆ ಹಾಗೂ ಎಡ ಕಣಕೈಯಲ್ಲಿ ತಾಯಿಯೇ ದೇವರು ಎಂದು ಹಚ್ಚೆ ಇರುತ್ತದೆ. ಈತನ ಮೈಮೇಲೆ ತಿಳಿ ನೀಲಿ ಬಣ್ಣದ ಕಪ್ಪು ಚುಕ್ಕೆಗಳಿರುವ ತುಂಬು ತೋಳಿನ ಅಂಗಿ ಹಾಗೂ ಕಾಫಿ ಬಣ್ಣದ ಕಾಟನ್ ಜೀನ್ಸ್ ಪ್ಯಾಂಟ್ ಇರುತ್ತದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.0816- 2278388, ಮೊ.9480802945 ಸಂಪರ್ಕಿಸಿ.