

ತುಮಕೂರು: ಗ್ರಾಮೀಣ ಭಾಗದ ಜನರಿಗೆ, ಪ್ರಾಣಿ, ಪಕ್ಷಿಗಳು, ನೈಸರ್ಗಿಕವಾಗಿ ಅನುಕೂಲವಾಗಲು ಕೆರೆ, ಕಟ್ಟೆಗಳನ್ನು ಉಳಿಸಿ, ಅಭಿವೃದ್ಧಿಪಡಿಸಬೇಕು ಎಂದು ಕೆರೆಗೋಡಿ ರಂಗಾಪುರ ಶ್ರೀಗುರುಪರದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಿಪಟೂರು ತಾಲೂಕು ರಂಗಾಪುರದಲ್ಲಿ ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ 9.5 ಲಕ್ಷ ವೆಚ್ಚದಲ್ಲಿ `ನಮ್ಮ ಊರು ನಮ್ಮ ಕೆರೆ ಯೋಜನೆ'ಯಲ್ಲಿ
ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರ ಮಾಡಬೇಕಾದಂತಹ ಅನೇಕ ಕಾರ್ಯಗಳನ್ನು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಡಾ.ವೀರೇಂದ್ರ ಹೆಗಡೆಯವರು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ಗೌತಮಿ, ಯೋಜನೆಯ ಬೆಂಗಳೂರಿನ ಪ್ರಾದೇಶಿಕ ವಿಭಾಗದ ನಿರ್ದೇಶಕ ಎಂ.ಶಿವÀಪ್ಪ, ಪ್ರಾದೇಶಿಕ ವಿಭಾಗದ ಅಭಿಯಂತರ ಅರುಣ್, ತಿಪಟೂರು ವಿಭಾಗದ ಯೋಜನಾಧಿಕಾರಿ ಉದಯ್, ಗ್ರಾಮಾಂತರ ಯೋಜನಾಧಿಕಾರಿ ಸುರೇಶ್, ಮೇಲ್ವಿಚಾರಕರಾದ ಅಣ್ಣಪ್ಪ, ಪ್ರದೀಪ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನೋಹರ್, ಶಂಕರಮೂರ್ತಿ ಮತ್ತಿತರರು ಇದ್ದರು.