

ತುಮಕೂರು: ತೋಟಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಮತ್ತು ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳಿಗೆ ಸಹಾಯಧನ ಕಾರ್ಯಕ್ರಮದಡಿ ಸೋಲಾರ್ ಪಂಪ್ ಸೆಟ್ ಹಾಗೂ ವಿವಿಧ ಯಂತ್ರೋಪಕರಣ ಖರೀದಿಸಲು ಸಹಾಯಧನ ನೀಡಲಾಗುತ್ತಿದೆ.
ಹೊಸ ಪ್ರದೇಶ ವಿಸ್ತರಣೆ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಡ್ರಾಗನ್ ಪ್ರೂಟ್ ಮತ್ತು ನುಗ್ಗೆ ಗಿಡಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ರೈತರಿಗೆ ಶೇ.40 ರಂತೆ ಕನಿಷ್ಟ 0.10 ಗುಂಟೆಯಿAದ ಗರಿಷ್ಟ 2 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತಿದೆ.
ಆಸಕ್ತ ರೈತರು ಮಾಹಿತಿಗಾಗಿ ತುಮಕೂರು 0816-2279705, ಗುಬ್ಬಿ 08131-222659, ಶಿರಾ 08135-276310, ಕುಣಿಗಲ್ 08132-221981, ತಿಪಟೂರು 08134-251424, ಚಿಕ್ಕನಾಯಕನಹಳ್ಳಿ 08133-267457, ಮಧುಗಿರಿ 08137-282417, ತುರುವೇಕೆರೆ 08139-288350, ಕೊರಟಗೆರೆ 08138-232920 ಹಾಗೂ ಪಾವಗಡ 08136-244064 ಸಂಪರ್ಕಿಸಿ.