

ತುಮಕೂರು: ಸ್ವಚ್ಛ ಸರ್ವೇಕ್ಷಣ್-2023 ಪ್ರಪಂಚದ ಅತಿ ದೊಡ್ಡ ಶುಚಿತ್ವ ಸ್ಪರ್ಧೆಯಲ್ಲಿ ತುಮಕೂರು ನಗರ ಕೂಡ ಭಾಗವಹಿಸುತ್ತಿದೆ.
ತುಮಕೂರು ಮಹಾನಗರಪಾಲಿಕೆ ನಗರವನ್ನು ಸ್ವಚ್ಛನಗರವನ್ನಾಗಿಸುವ ಉದ್ದೇಶದಿಂದ ಸಾರ್ವಜನಿಕರ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಸಲುವಾಗಿ ಸ್ವಚ್ಛ ತುಮಕೂರು ಸ್ಪರ್ಧೆ ಹಮ್ಮಿಕೊಂಡಿದೆ.
ಸ್ಪರ್ಧೆ ಐದು ವಿಭಾಗಗಗಳಲ್ಲಿ ನಡೆಯಲಿದ್ದು, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಹೋಟೆಲ್, ಮಾರುಕಟ್ಟೆ ಸಂಘಗಳು ಹಾಗೂ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಸೆ.7ರೊಳಗೆ ಅರ್ಜಿ ಸಲ್ಲಿಸಬಹುದು.
ಆಸಕ್ತರು ಜಾಲತಾಣ www.tumkurcity.mrc.gov.in ಮೂಲಕ ಅರ್ಜಿ ಡೌನ್‌ಲೋಡ್ ಮಾಡಿ itstaff_ulb_tumkur@yahoo.com ಇಮೇಲ್ ಮೂಲಕ ಅಥವಾ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ದೂ.0816-2271200, 2272200 ಸಂಪರ್ಕಿಸಿ.