

ತುಮಕೂರು: ರಾಜಕೀಯ ಅಸ್ಥಿತ್ವಕ್ಕೆ ಗ್ರಾಮಾಂತರದ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಬಾಗಿಲು ತಟ್ಟಿರಬಹುದು, ಆದರೆ, ಗ್ರಾಮಾಂತರ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದು ಶಾಸಕ ಬಿ.ಸುರೇಶ್‌ಗೌಡ ಹೇಳಿದರು.
ವಿಜಯವಾಣಿ ಸಂವಾದದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ನರೇಂದ್ರಮೋದಿ ಪ್ರಧಾನಿಯಾಗಬೇಕು ಎಂದು ದೇಶದ ಜನರು ಬಯಸಿದ್ದು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಹೋರಾಡುತ್ತೇವೆ ಎಂದರು.
ಕಾಂಗ್ರೆಸ್ ಮುಖಂಡರಾದ ಡಿಕೆ ಸಹೋದರರ ಜತೆಗಿನ ಇತ್ತೀಚೆಗಿನ ಸ್ನೇಹದ ಬಗ್ಗೆಯೂ ಸ್ಪಷ್ಟನೆ ನೀಡಿದ ಅವರು, ಡಿ.ಕೆ.ಶಿವಕುಮಾರ್ ನಮ್ಮ ಸಮಾಜದ ಮುಖಂಡರು, ಹಾಗಾಗಿ ಭೇಟಿಯಾಗಿz್ದೆÃನೆ ಎಂದರು.
ಈ ಹಿಂದೆಯೂ ಕಾಂಗ್ರೆಸ್‌ಗೆ ಎಲ್ಲಾ ನಾಯಕರು ಆಹ್ವಾನಿಸಿದ್ದರು ನಾನು ಹೋಗಲಿಲ್ಲ. ಈಗ ಪಕ್ಷಾಂತರದ ಬಗ್ಗೆ ಚಿಂತನೆ ಕೂಡ ಇಲ್ಲ. ಕಾಂಗ್ರೆಸ್‌ನಲ್ಲಿಯೇ ಹಿರಿಯ ನಾಯಕರು ಈಗಾಗಲೇ ಸರ್ಕಾರದ ಮೇಲೆ ಅಸಮಧಾನಗೊಂಡಿದ್ದಾರೆ, ಕಾಂಗ್ರೆಸ್‌ನಲ್ಲಿ ಉಳಿಯುಲು ಶಕ್ತಿ ನಡೆಯಲ್ಲ, ಯುಕ್ತಿ ಇರುವವರಿಗಷ್ಟೇ ಉಳಿಗಾಲ ಎಂದರು.