

ಕುಣಿಗಲ್: ಹುಲಿಯೂರುದುರ್ಗ ಹೋಬಳಿಯ ತಾವರೆಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗೆ ಹಾಜರಾದ 10 ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದು, ಈ ಪೈಕಿ ನಾಲ್ವರು ವಿಶಿಷ್ಟ ಶ್ರೇಣಿ(ಡಿಸ್ಟಿಂಗ್ಸೆನ್) ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿ ಯಶಸ್ ಟಿ.ಎಂ. ಶೇ.94.88 ಪಡೆದು ಶಾಲೆಗೆ ಟಾಪರ್ ಬಂದಿದ್ದಾರೆ. ಶಿವರಂಜಿನಿ (ಶೇ.92.36), ಯಶಸ್ವಿ ಟಿ.ಎಂ. (ಶೇ.89.92), ಚೈತ್ರಾ ಸಿ. (ಶೇ.85.76) ಅವರು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಯಶಸ್ ಟಿ.ಎಂ. ಅವರು ಕನ್ನಡದಲ್ಲಿ 125ಕ್ಕೆ 125, ಇಂಗ್ಲಿಷ್ ನಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ಚೈತ್ರಾ ಸಿ. ಕೂಡ ಕನ್ನಡದಲ್ಲಿ 125 ಅಂಕ ಪಡೆದಿದ್ದಾರೆ.