

ತುಮಕೂರು: ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕರಾಗಿದ್ದ ರಾಹುಲ್‌ಕುಮಾರ್ ಷಹಪುರವಾಡ್ ಅವರನ್ನು ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಹುದ್ದೆಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಖಾಲಿಯಾಗಿರುವ ಹುದ್ದೆಗೆ 2017ರ ಐಪಿಎಸ್ ಬ್ಯಾಚ್‌ನ್ನ ಅಧಿಕಾರಿ ಕರ್ನಾಟಕ ಲೋಕಾಯುಕ್ತ ಅಧೀಕ್ಷಕರಾಗಿರುವ ಕೆ.ವಿ.ಅಶೋಕ್ ಅವರನ್ನು ವರ್ಗಾಹಿಸಲಾಗಿದೆ.
2021 ಜೂ.9ರಂದು ರಾಹುಲ್‌ಕುಮಾರ್ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಅಧಿಕಾರವಹಿಸಿಕೊಂಡಿದ್ದರು. ಸತತ 2 ವರ್ಷಕ್ಕೂ ಅಧಿಕ ಕಾಲದಿಂದಲೂ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಸಾಮಾನ್ಯ ಜನರಿಗೂ ಸುಲಭವಾಗಿ ಸಿಗವ ಅಧಿಕಾರಿ ಎನ್ನಿಸಿಕೊಂಡು ಜನಪರ ಪೊಲೀಸ್ ಅಧಿಕಾರಿಯಾಗಿದ್ದಾರೆ.