ಚಪ್ಪಲಿ, ಶೂ ಪಾಲೀಷ್ ಮಾಡಿದ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು

GFGC_photo (4)
Published on

ತುಮಕೂರು: ಸೇವಾ ಭದ್ರತೆಗಾಗಿ ಕಳೆದ 28 ದಿನಗಳಿಂದ ತರಗತಿ ಭಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಶೂ ಮತ್ತು ಚಪ್ಪಲಿ ಪಾಲಿಷ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಅಸಮಧಾನ ಹೊರಹಾಕಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಮುಂದುವರಿಸಿರುವ ಅತಿಥಿ ಉಪನ್ಯಾಸಕರು ಶೂ ಮತ್ತು ಚಪ್ಪಲಿ ಪಾಲಿಷ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ಪ್ರತಿನಿತ್ಯವೂ ಒಂದಿಲ್ಲೊAದು ರೀತಿ ವಿಭಿನ್ನ, ವಿನೂತನವಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರೂ ಸಹ ಸರ್ಕಾರ ಮಾತ್ರ ತಮ್ಮ ಸಮಸ್ಯೆಗಳತ್ತ ಕಿವಿಗೊಡುತ್ತಿಲ್ಲ ಎಂದು ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಡಾ.ಶಿವಣ್ಣ ತಿಮ್ಲಾಪುರ, ಸಿ.ಶಶಿಧರ್, ಡಾ.ಕೆ.ಎಚ್.ಧರ್ಮವೀರ, ಡಾ.ಎಂ.ಟಿ.ಮಲ್ಲಿಕಾರ್ಜುನ, ರೇಣುಕಾ, ಮಹಾಲಕ್ಷ್ಮಿ, ರಾಮಲಕ್ಷ್ಮೀ, ಅಂಬಿಕಾ, ಶಿವಲಿಂಗಯ್ಯ, ಆನಂದ್, ಶ್ರೀನಿವಾಸ್ ಗಂಗಾತನಯ, ಕಾಂತರಾಜು, ನಟರಾಜು, ರಘುನಾಥ್, ಶಂಕರ , ಮೂರ್ಖಣ್ಣಪ್ಪ, ಹನುಮಂತರಾಯಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net