

ತುಮಕೂರು: ಕುಣಿಗಲ್ ತಾಲೂಕು ಎಡೆಯೂರು ಶ್ರೀಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದ ವತಯಿಂದ ನಡೆಯುತ್ತಿರುವ ಶ್ರೀಸಿದ್ಧಲಿಂಗೇಶ್ವರಸ್ವಾಮಿ ಸಂಸತ, ವೇದ, ಜ್ಯೋತಿಷ್ಯ ಮತ್ತು ವೀರಶೈವಾಗಮ ಪಾಠಶಾಲೆಗೆ 2025&-26ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿಯು ಜೂ.2 ರಿಂದ ಪ್ರಾರಂಭವಾಗಲಿದೆ.
ಪಾಠಶಾಲೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಪಾಠಶಾಲೆಯಲ್ಲಿ ಸಂಸತ ಪ್ರಥಮ 1, 2, 3ನೇ ತರಗತಿ; ಸಂಸ್ಕತ ಕಾವ್ಯ 1, 2ನೇ ತರಗತಿ; ವೀರಶೈವ ವೇದ ಪ್ರಥಮ, ಪ್ರವೇಶ ಮೂಲ ತರಗತಿ; ವೀರಶೈವಾಗಮ ಪ್ರವರ, ಪ್ರವಿಣ ತರಗತಿ ಹಾಗೂ ಜ್ಯೋತಿಷ್ಯ ತರಗತಿಯನ್ನು ನಡೆಸಲಾಗುವುದು. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೋಧಿಸಲಾಗುವುದು.
ಆಸಕ್ತರು ಪಾಠಶಾಲೆಯ ಮುಖ್ಯೋಪಾಧ್ಯಾಯ ಮೊ.9731110045 ಸಂಪರ್ಕಿಸಿ.