ಕುಮಾರಸ್ವಾಮಿಗೆ ಸಿದ್ದಗಂಗಾಶ್ರೀಗಳ ಅಭಿನಂದನಾ ಪತ್ರ

HHHDDDKKK
Published on

ತುಮಕೂರು: ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಕೇಂದ್ರ ನೂತನ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಆಶೀರ್ವದಿಸಿ ಅಭಿನಂದನಾ ಪತ್ರ ನೀಡಿದರು. ಕರ್ನಾಟಕದಲ್ಲಿ ಬಂಡಾವಳ ಹೂಡಿಕೆಗೆ ಹಾಗೂ ಹೆಚ್ಚು ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡುತ್ತೀರೆಂದು ಭಾವಿಸುತ್ತೇನೆ ಎಂದು ಪತ್ರದಲ್ಲಿ ಶ್ರೀಗಳು ಹೇಳಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಜನಪರ ಕಾರ್ಯಗಳನ್ನು ರೂಪಿಸಿ ಜನರ ಪ್ರಶಂಸೆಗೆ ಪಾತ್ರರಾಗಿದ್ದೀರಿ. ಆ ಹಿನ್ನೆಲೆಯಲ್ಲಿ ನಿಮ್ಮ ಪ್ರತಿಭೆ ಮತ್ತು ಸಾಧನೆಗಳ ಪ್ರತಿÀಲವಾಗಿ ಈ ಸ್ಥಾನ ಸಿಕ್ಕಿದೆ. ನಿಮ್ಮ ವ್ಯಕ್ತಿತ್ವ, ಅನುಭವದಲ್ಲಿ ಸಚಿವ ಸ್ಥಾನದಲ್ಲಿ ಅಭೂತಪೂರ್ವ ಬದಲವಾವಣೆ, ಅಭಿವೃದ್ಧಿಯನ್ನು ತರಬಲ್ಲೀರೆಂಬ ವಿಶ್ವಾಸ ನಮಗಿದೆ.

ದೇಶದ ಆರ್ಥಿಕ ಅಭಿವೃದ್ಧಿಗೆ ನೀವು ನೀಡಲಿರುವ ಕೊಡುಗೆಗಳು ಮತ್ತು ಸೇವೆಗಗಳು ಅತ್ಯಮೂಲ್ಯವೆನಿಸಲಿವೆ ಎಂದು ಆಶೀರ್ವದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net