

ತುಮಕೂರು: ಹುಬ್ಬ ಮಳೆ ಆಗಸ್ಟ್ 31ರಿಂದ ಸೆ.12ರ ವರೆಗೆ ಇರಲಿದ್ದು ಜಿಲ್ಲೆಯಲ್ಲಿ ಸೆ.3ರ ವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ರಾತ್ರಿ ತುಮಕೂರಿನಲ್ಲಿ ಹದವಾದ ಮಳೆ ಸುರಿದಿದೆ, ಸೆ.1ರಂದು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 14.8ಮಿಮೀ, ಗುಬ್ಬಿ 10.1, ಕೊರಟಗೆರೆ 10.4, ಕುಣಿಗಲ್ 9.4, ಮಧುಗಿರಿ 12, ಶಿರಾ 0.8, ತಿಪಟೂರು 17.6, ತುಮಕೂರು 19.2, ಪಾವಗಡ 17.5 ಹಾಗೂ ತುರುವೇಕೆರೆಯಲ್ಲಿ 12.4ಮಿಮೀ ಮಳೆಯಾಗುವ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಭಾವದಿಂದ ಈಗಾಗಲೇ ರಾಗಿ, ಶೇಂಗಾ ಸೇರಿದಂತೆ ಬೆಳೆಗಳು ನಾಶವಾಗಲಾರಂಭಿಸಿವೆ. ಗುರುವಾರ ರಾತ್ರಿ ಸುರಿದಿರುವ ಮಳೆ ರೈತನ ಮನದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಐದು ದಿನ ಗಾಳಿಯ ವೇಗ ಗಂಟೆಗೆ ಸರಾಸರಿ 15.0-18.0 ಕಿಮೀ ವೇಗದಲ್ಲಿ ಬೀಸುವ ಸಂಭವವಿದೆ.
ಗರಿಷ್ಟ ಉಷ್ಣಾಂಶ 30.0ಡಿಗ್ರಿ ಸೆಲ್ಸಿಯಸ್‌ನಿಂದ 32ಡಿಗ್ರಿವರೆಗೂ ಹಾಗೂ ಕನಿಷ್ಟ ಉಷ್ಣಾಂಶ 15ಡಿಗ್ರಿಯಿಂದ 18 ಡಿಗ್ರಿವರೆಗೂ ಇರಲಿದೆ.