

ತುಮಕೂರು: ಜಿಲ್ಲೆಯಲ್ಲಿ ಬರದ ಛಾಯೆ ಕಡಿಮೆಯಾಗಲಾರಂಭಿಸಿದ್ದು ಶುಕ್ರವಾರ ರಾತ್ರಿ ಕೂಡ ಬಹುತೇಕ ಕಡೆಗಳಲ್ಲಿ ಮಳೆ ಸುರಿದಿದೆ.
ತುಮಕೂರು ನಗರದಲ್ಲಿಯೂ ವರ್ಷದ ಮೊದಲ ಮಳೆ ಶುಕ್ರವಾರ ರಾತ್ರಿ ಸುಮಾರು 11.20 ರಿಂದ ಸುಮಾರು 1ಗಂಟೆಗೂ ಹೆಚ್ಚು ಕಾಲ ಸುರಿದಿದ್ದು ಮರ, ಗಿಡಗಳಿಗೆ ಜೀವತುಂಬಿದೆ.
ಭರಣಿ ಮಳೆ ಹುಯ್ದರೆ ಧರಣಿಯೆಲ್ಲಾ ಆರಂಭ ಎಂಬ ಗಾದೆ ಮಾತಿದೆ ಹಾಗಾಗಿ, ಭರಣಿ ಮಳೆಗಾಗಿ ಕಾದವರಿಗೆ ನಿರಾಸೆಯಾಗದೆ ಕೊನೆಯ ದಿನ ಸುರಿದಿದೆ. ಶನಿವಾರದಿಂದಲೇ ಕೃತಿಕಾ ಮಳೆ ಆರಂಭವಾಗಿದೆ.
ಗುಬ್ಬಿ ತಾಲೂಕು ಕಡಬದಲ್ಲಿ 53.4ಮಿಮೀ, ನಿಟ್ಟೂರಿನಲ್ಲಿ ಸುರಿದಿದ್ದು 55.3ಮಿಮೀ, ಅಂಕಸAದ್ರದಲ್ಲಿ 17.8, ಚೇಳೂರು 7, ಸಿ.ಎಸ್.ಪುರದಲ್ಲಿ 2ಮಿಮೀ ಮಳೆಯಾಗಿದೆ.
ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಳೆ ತುರುವೇಕೆರೆ ತಾಲೂಕು ಸಂಪಿಗೆಯಲ್ಲಿ 57ಮಿಮೀ, ತುರುವೇಕೆರೆ 45, ಮಾಯಸಂದ್ರ 1.8, ದಂಡಿನಶಿವರ 15.6, ಪಾವಗಡ 10ಮಿಮೀ, ನಾಗಲಮಡಿಕೆ 16.4, ತಿರುಮಣಿ 8 ಹಾಗೂ ವೈ.ಎನ್.ಹೊಸಕೋಟೆಯಲ್ಲಿ 7.4ಮಿಮೀ ಮಳೆಯಾಗಿದೆ.
ಹುಳಿಯಾರು 4.8, ದೊಡ್ಡಎಣ್ಣೆಗೆರೆ 10.1, ಮಧುಗಿರಿ 2.2, ಬಡುವನಹಳ್ಳಿ 8, ಮಡಿಗೇಶಿ 3, ಬ್ಯಾಲ್ಯ 1, ಐಡಿ ಹಳ್ಳಿ 5.2ಮಿಮೀ ಮಳೆಯಾಗಿದೆ. ತುಮಕೂರು ರೈಲ್ವೆ ನಿಲ್ದಾಣದಲ್ಲಿ 22ಮಿಮೀ, ಹೆಬ್ಬೂರು 6.6, ಬೆಳ್ಳಾವಿ 39.2, ಊರ್ಡಿಗೆರೆ 2.1, ಹಿರೇಹಳ್ಳಿ 34.2ಮಳೆಯಾಗಿದೆ.
ಸಿರಾದಲ್ಲಿ 2, ಬರಗೂರು 2.6, ಕಳ್ಳಂಬೆಳ್ಳ 2.6, ಬುಕ್ಕಾಪಟ್ಟಣ 1, ತಿಪಟೂರು ತಾಲೂಕು ನೊಣವಿನಕೆರೆ 0.6ಮಿಮೀ, ಕೊರಟಗೆರೆ ತಾಲೂಕು ಮಾವತ್ತೂರು 6.2, ತೋವಿನಕೆರೆ 37.8ಮಿಮೀ ಮಳೆ ಸುರಿದಿದ್ದು ಕೃಷಿ ಚಟುವಟಿಕೆ ಗರಿಗೆದರಿದೆ.