ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟ; ಹಾಲ್ಕುರಿಕೆಯಲ್ಲಿ ಹೆಚ್ಚು ಮಳೆ

RRRRRRR
Published on

ತುಮಕೂರು: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ಸೋಮವಾರ ಮಧ್ಯಾಹ್ನದಿಂದಲೇ ಎಲ್ಲೆಡೆಯೂ ಧಾರಾಕಾರ ಮಳೆ ಧೋ ಎಂದು ಸುರಿದಿದ್ದು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ತುಮಕೂರಿನಲ್ಲಿ ಸೋಮವಾರ ಮಧ್ಯಾಹ್ನದಿಂದಲೇ ಮಳೆ ಆರಂಭವಾಗಿದ್ದರಿAದ ಸಂಚಾರ ಅಸ್ತವ್ಯಸ್ತವಾಯಿತು. ಶಾಲೆ, ಕಾಲೇಜು ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಪರದಾಡಿದರು.

ಭಾನುವಾರ ರಾತ್ರಿಯವರೆಗೂ ಪಾವಗಡ ತಾಲೂಕು ಅರಸೀಕೆರೆಯಲ್ಲಿ 68.3ಮಿಮೀ, ವೈ.ಎನ್.ಹೊಸಕೋಟೆ 24, ನಾಗಲಮಡಿಕೆ 18, ಕಸಬಾ 15 ಮಿಮೀ ಮಳೆಯಾಗಿದೆ. ಚಿಕ್ಕನಾಯಕನಹಳ್ಳಿ 11.3, ಶೆಟ್ಟಿಕೆರೆ 17.8, ಸಿಂಗದಹಳ್ಳಿ 15, ಮತಿಘಟ್ಟ 13, ಹುಳಿಯಾರು 8.4, ಬೋರನಕಣಿವೆ 4.4ಮಿಮೀ ಮಳೆಯಾಗಿದೆ.

ತುಮಕೂರು ತಾಲೂಕು ಬೆಳ್ಳಾವಿಯಲ್ಲಿ ಅತೀ ಹೆಚ್ಚು 48.8ಮಿಮೀ, ತುಮಕೂರು 33.2, ಹೆಬ್ಬೂರು 9.6, ಊರ್ಡಿಗೆರೆ 5.1, ಹಿರೇಹಳ್ಳಿ 7.4 ಹಾಗೂ ನೆಲಹಾಳ್‌ನಲ್ಲಿ 30ಮಿಮೀ ಮಳೆಯಾಗಿದೆ. ಕೊರಟಗೆರೆ 18, ತುಂಬಾಡಿ 7.5, ಹೊಳವನಹಳ್ಳಿ 26.2,ಮಾವತ್ತೂರು 11.4, ಇರಕಸಂದ್ರ ಕಾಲೋನಿ 19.8, ಕೊಳಾಲ 4, ತೋವಿನಕೆರೆ 27.4ಮಿಮೀ ಮಳೆಯಾಗಿದೆ.

ತುರುವೇಕೆರೆ 56.8, ಸಂಪಿಗೆ 30.4, ಮಾಯಸಂದ್ರ 2.2, ದಂಡಿನಶಿವರ 18.6, ದೆಬ್ಬಘಟ್ಟ 10.4, ತಿಪಟೂರು 12.4, ಕಿಬ್ಬನಹಳ್ಳಿ 8.4, ನೊಣವಿನಕೆರೆ 10.8, ಹೊನ್ನವಳ್ಳಿ 6 ಹಾಗೂ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಹಾಲ್ಕುರಿಕೆಯಲ್ಲಿ ಅತೀ ಹೆಚ್ಚು 84.2ಮಿಮೀ ಮಳೆ ಸುರಿದ್ದಿ ಬೈರಾಪುರದಲ್ಲಿ ರಸ್ತೆಯಲ್ಲಿಯೇ ಹಳ್ಳ ಹರಿದ ಕಾರಣಕ್ಕೆ ವಾಹನ ಸವಾರರು ಪರದಾಡಿದರು.

ಶಿರಾ ನಗರದಲ್ಲಿ 68, ಬುಕ್ಕಾಪಟ್ಟಣ 9.4, ತಾವರೇಕೆರೆ 12.4, ಹುಣುಸೆಹಳ್ಳಿ 32.4, ಕಳ್ಳಂಬೆಳ್ಳ 23.2, ಬರಗೂರು 35.2, ಚಿಕ್ಕನಹಳ್ಳಿ 29.6, ಕುಣಿಗಲ್ 4.6, ಹುಲಿಯೂರುದುರ್ಗ 5.5, ಸಂತೇಪೇಟೆ 2.4, ಅಮೃತೂರು 11.1, ನಿಡಸಾಲೆ 14.5ಮಿಮೀ ಮಳೆಯಾಗಿದೆ.

ಗುಬ್ಬಿ 31, ನಿಟ್ಟೂರು 4.1, ಸಿ.ಎಸ್.ಪುರ 15.8, ಚೆಳೂರು 17, ಅಂಕಸAದ್ರ 12.8, ಕಡಬ 12.8, ಹಾಗಲವಾಡಿ 39, ಮಧುಗಿರಿ 11.2, ಬಡವನಹಳ್ಳಿ 10, ಬ್ಯಾಲ್ಯ 10.1, ಮಿಡಿಗೇಶಿ 18.5, ಕೊಡಿಗೇನಹಳ್ಳಿ 5 ಹಾಗೂ ಐಡಿ ಹಳ್ಳಿ 16.2ಮಿಮೀ ಮಳೆಯಾಗಿದ್ದು ಸೋಮವಾರ ಸುರಿದಿರುವ ಮಳೆಯ ವರದಿ ಇಂದು ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net