ಪುಟ್ಟಸ್ವಾಮಯ್ಯನ ಪಾಳ್ಯದಲ್ಲಿ ವೈಭವದ ಶನೈಶ್ಚರ ಸ್ವಾಮಿ ಉತ್ಸವ

w1
Published on

ತುಮಕೂರು: ಕೃಷ್ಣ ಪಕ್ಷ ತದಿಗೆ ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ ನಗರದ ಶಿರಾ ಗೇಟ್‌ನ ಪುಟ್ಟಸ್ವಾಮಯ್ಯನ ಪಾಳ್ಯದ ಶ್ರೀಗುರು ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಭಾನುವಾರ ಪುಟ್ಟಸ್ವಾಮಯ್ಯನ ಪಾಳ್ಯ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಶ್ರೀಗುರು ಶನೈಶ್ಚರ ಸ್ವಾಮಿಯ ವೈಭವದ ಉತ್ಸವ ನೆರವೇರಿತು. ಉತ್ಸವ ಸಾಗುವ ಮಾರ್ಗದಲ್ಲಿ ಭಕ್ತರು ರಂಗೋಲಿ ಹಾಕಿ, ತಳಿರು ತೋರಣದ ಅಲಂಕಾರ ಮಾಡಿ ಸ್ವಾಮಿಯನ್ನು ಸ್ವಾಗತಿಸಿ, ಪೂಜೆ ಸಲ್ಲಿಸಿದರು.

ಶ್ರೀಗುರು ಶನೈಶ್ಚರ ಸ್ವಾಮಿ ಧಾರ್ಮಿಕ ಸೇವಾ ಟ್ರಸ್ಟ್ ವ್ಯವಸ್ಥೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಶನಿವಾರ ದೇವಸ್ಥಾನದಲ್ಲಿ ಕ್ಷೀರಾಭಿಷೇಕ, ರುದ್ರಾಭಿಷೇಕ, ನವಗ್ರಹ ಹೋಮ, ಪೂರ್ಣಾಹುತಿ, ಸ್ವಾಮಿಗೆ ವಿಶೇಷ ಅಲಂಕಾರ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ, ಅನ್ನಸಂತರ್ಪಣೆ, ಧಾರ್ಮಿಕ ಕಾರ್ಯಕ್ರಮ, ಊರಿನ ಹಿರಿಯರಿಗೆ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಟ್ರಸ್ಟ್ ಮುಖಂಡರಾದ ನರಸೇಗೌಡ, ವಿರೂಪಾಕ್ಷಯ್ಯ, ನರಸಿಂಹಮೂರ್ತಿ, ತುಮಕೂರಯ್ಯ, ಕೆ.ಕುಂಭಯ್ಯ, ಟಿ.ಎನ್.ಕುಂಭಯ್ಯ, ಲಕ್ಷ್ಮೀನಾರಾಯಣ, ಭೀಮಯ್ಯ, ನರಸಯ್ಯ, ಲೋಕೇಶ್, ಶಿವಗಂಗಯ್ಯ, ಮರಿಗಂಗಯ್ಯ ಮತ್ತಿತರರು ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net