ಡಿಕೆಶಿ ಮೇಲಿನ ಆರೋಪಗಳನ್ನು ನಮ್ಮ ಸರ್ಕಾರ ವಾಪಸ್ ಪಡೆದಿಲ್ಲ; ಗೃಹ ಸಚಿವ ಡಾ.ಜಿ.ಪರಮೇಶ್ವರ್

18 Dwd 1 (Dr. G.Parameshwar) - Copy
Published on

ತುಮಕೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲಿನ ಸಿಬಿಐ ತನಿಖೆ ವಾಪಸ್ ಪಡೆದಿರುವ ಸಂಪುಟ ಸಭೆಯ ತೀರ್ಮಾನವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಕಾನೂನು ಉಲ್ಲಂಘಿಸಿ ನೀಡಿದ್ದ ಅನುಮತಿಯನ್ನು ನಮ್ಮ ಸರ್ಕಾರ ಅಡ್ವೋಕೇಟ್ ಜನರಲ್ ಅವರ ಲಿಖಿತ ಅಭಿಪ್ರಾಯ ಪಡೆದು ವಾಪಸ್ ಪಡೆದಿದೆ ಎಂದರು.

ಸ್ಪೀಕರ್ ಅನುಮತಿ ಪಡೆಯದೆ ತನಿಖೆಗೆ ಮೌಖಿಕ ಆದೇಶ ನೀಡಿರುವುದು ದುರುದ್ದೇಶವಾಗಿದೆ. ನಿಯಮಾವಳಿ ಪ್ರಕಾರ ಉಭಯ ಸದನದ ಶಾಸಕರನ್ನು ಮಹತ್ವದ ತನಿಖೆಗೊಳಪಡಿಸಬೇಕಾದರೆ ಸ್ಪೀಕರ್ ಅಥವಾ ಸಭಾಪತಿ ಅನುಮತಿ ಪಡೆಯಬೇಕು ಎಂದರು.

ಸಿಬಿಐ ತನಿಖೆ ಅನುಮತಿ ವಾಪಸ್ ಪಡೆದ ಸರ್ಕಾರದ ನಿರ್ಣಯದ ಆದೇಶ ಹೊರಡಿಸಿ ಕೋರ್ಟ್ ಗೆ ಸಲ್ಲಿಸಲಾಗುವುದು. ಶಿವಕುಮಾರ್ ಮೇಲಿನ ಆರೋಪಗಳನ್ನು ನಮ್ಮ ಸರ್ಕಾರ ವಾಪಸ್ ಪಡೆದಿಲ್ಲ, ನಿಯಮ ಪಾಲಿಸದೇ ಸಿಬಿಐಗೆ ಒಪ್ಪಿಸಿರುವ ತನಿಖೆ ವಾಪಸ್ ಪಡೆದಿದ್ದೇವೆ ಎಂದು ಸ್ಪಷ್ಟಪಡಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net