ದಸರಾ ಸಿದ್ಧತೆಯಲ್ಲಿನ ಲೋಪಕ್ಕೆ ಡಾ.ಜಿ.ಪರಮೇಶ್ವರ ಗರಂ; ರಾತೊರಾತ್ರಿ ಕಾಂಗ್ರೆಸ್ ಮುಖಂಡರ ಪ್ಲಕ್ಸ್ ಪ್ರತ್ಯಕ್ಷ

2222222
Published on

ತುಮಕೂರು: ನಗರದಲ್ಲಿ ಆಯೋಜಿಸಿರುವ ದಸರಾ ಆಚರಣೆ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಪರಮೇಶ್ವರ ತರಾಟೆಗೆ ತೆಗೆದುಕೊಂಡ ಬೆನ್ನಹಿಂದೆಯೇ ರಾತೊರಾತ್ರಿಯೇ ಅನಧಿಕೃತವಾಗಿ ಕಟ್ಟಿರುವ ಪ್ಲೆಕ್ಸ್ ಕಾರ್ಯಾಚರಣೆಗೆ ಜಿಲ್ಲಾಧಿಕಾರಿ ಮುಂದಾಗಿದ್ದ ಘಟನೆಯೂ ನಡೆದಿದೆ.

ಪೊಲೀಸ್ ಬಿಗಿ ಬಂದೂಬಸ್ತ್ಬಲ್ಲಿ ಪ್ಲಕ್‌ಗಳನ್ನು ತೆರೆವುಗೊಳಿಸಲು ಪಾಲಿಕೆ ಅಧಿಕಾರಿಗಳು ಮುಂದಾದಾಗ ಸಂಘಟಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆದಿದೆ.

ಅನುಮತಿ ಪಡೆದಿರುವ ಪ್ಲಕ್ಸ್ಗಳನ್ನು ತೆರವುಗೊಳಿಸಿ ವಿವಾದ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದು ಜಿಲ್ಲಾ ಪೊಲೀಸ್ ಇಲಾಖೆ ಸಲಹೆ ಮೇರೆಗೆ ಸುಮ್ಮನಾದರು ಎನ್ನಲಾಗಿದೆ. ಈ ನಡುವೆ ರಾತೊರಾತ್ರಿ ಕಾಂಗ್ರೆಸ್ ಮುಖಂಡರು ಇರುವ ಪ್ಲಕ್ಸ್ಗಳು ಕೂಡ ನಗರದೆಲ್ಲೆಡೆ ಪ್ರತ್ಯಕ್ಷವಾಗಿವೆ.

ಜಿಲ್ಲಾಡಳಿತದಿಂದ ಆಯೋಜಿಸಿರುವ ದಸರಾ ಆಚರಣೆ ಆಮಂತ್ರಣ ಪತ್ರಿಕೆಯಲ್ಲಿ ಒಂದು ರಾಜಕೀಯ ಪಕ್ಷದ ಮುಖಂಡರಿಗೆ ಆದ್ಯತೆ ನೀಡಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಪರಮೇಶ್ವರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಿಗೆ ತರಾಟೆಗೆ ತೆಗೆದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net