ಯುಜಿಡಿಗೆ ಮಳೆ ನೀರು ಬಿಡದಂತೆ ಪಾಲಿಕೆ ಮನವಿ

TUMKUR PALIKE
Published on

ತುಮಕೂರು: ಮನೆಗಳ ಮೇಲ್ಚಾವಣಿ, ಬಾಲ್ಕನಿ ಹಾಗೂ ಇನ್ನಿತರ ಸ್ಥಳಗಳಿಂದ ಬರುವ ಮಳೆ ನೀರನ್ನು ಯುಜಿಡಿ ಪೈಪ್‌ಲೈನ್‌ಗೆ ಸಂಪರ್ಕಿಸಿರುವವರು 15 ದಿನಗಳೊಳಗಾಗಿ ಸಂಪರ್ಕ ಕಡಿತಗೊಳಿಸಿ ಮಳೆ ನೀರನ್ನು ಚರಂಡಿಗೆ ಹೋಗುವಂತೆ ಸಂಪರ್ಕ ನೀಡಲು ಪಾಲಿಕೆ ಆಯುಕ್ತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆ ಬಂದAತಹ ಸಂದರ್ಭದಲ್ಲಿ ಯುಜಿಡಿ ಕೊಳವೆ ಸಾಲುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ತುಮಕೂರು ನಗರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಯುಜಿಡಿ ಕೊಳವೆ ಸಾಲನ್ನು ಮಳೆ ನೀರನ್ನು ಹೊರತುಪಡಿಸಿ ವಿನ್ಯಾಸಗೊಳಿಸಲಾಗಿರುತ್ತದೆ. ಹಾಗಾಗಿ, ಪೈಪ್‌ಲೈನ್‌ನಲ್ಲಿ ಉಂಟಾಗುವ ಅಧಿಕ ಒತ್ತಡದಿಂದ ತ್ಯಾಜ್ಯ ನೀರು ರಸ್ತೆಯ ಮಟ್ಟಕ್ಕಿಂತ ಕೆಳಗಿರುವ ಮನೆಗಳಿಗೆ ಹಿಮ್ಮುಖವಾಗಿ ಹರಿದು ಆಸ್ತಿ-ಪಾಸ್ತಿಗೆ ಹಾನಿಯನ್ನುಂಟು ಮಾಡುತ್ತಿರುತ್ತದೆ ಹಾಗೂ ರಸ್ತೆಗಳಲ್ಲಿನ ಮೆಷಿನ್ ಹೋಲ್‌ಗಳು ಹೊರ ಉಕ್ಕಿ ಸಾರ್ವಜನಿಕರ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯನ್ನುAಟು ಮಾಡುತ್ತಿದೆ.

ಮುಂದಿನ ದಿನಗಳಲ್ಲಿ ಪಾಲಿಕೆಯ ಅಧಿಕಾರಿಗಳು, ನೌಕರರು ಪರಿಶೀಲಿಸುವ ಸಂದರ್ಭದಲ್ಲಿ ಯಾರಾದರೂ ಮಳೆ ನೀರನ್ನು ಯುಜಿಡಿ ಕೊಳವೆ ಸಾಲಿಗೆ ಸಂಪರ್ಕಿಸಿರುವುದು ಕಂಡು ಬಂದಲ್ಲಿ ಪಾಲಿಕೆ ನಿಯಮಾನುಸಾರ ದಂಡ ವಿಧಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net