

ತುಮಕೂರು: ಗುಬ್ಬಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲೆಯ ಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಗೈರು ಹಾಜರಾಗಿದ್ದರು, ಇಡೀ ಸಮಾರಂಭಲ್ಲಿ ಡಿ.ಕೆ.ಶಿವಕುಮಾರ್ ಮಯಗೊಳಿಸಲಾಗಿತ್ತು. ಸಮಾರಂಭದಲ್ಲಿಯೂ ಮುಂದಿನ ಸಿಎಂ ಡಿಕೆಶಿ, ಮಂದಿನ ಮಂತ್ರಿ ವಾಸಣ್ಣ ಎಂಬ ಘೋಷಣೆಗಳು ಮೊಳಗಿದವು.
ಈ ಸಂದರ್ಭದಲ್ಲಿ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವ ಟಿ.ಬಿ.ಜಯಚಂದ್ರ ಮುಖ ಸಣ್ಣಗೆ ಮಾಡಿಕೊಂಡರು.
ಡಿ.ಕೆ.ಶಿವಕುಮಾರ್ ಮಾತನಾಡುವಾಗಲೂ, ಎಸ್.ಆರ್.ಶ್ರೀನಿವಾಸ್ ಕ್ಷೇತ್ರಬೇರೆ ಅಲ್ಲ, ನನ್ನ ಕ್ಷೇತ್ರ ಬೇರೆಯಲ್ಲ. ಎಲ್ಲಾ ಕ್ಷೇತ್ರಗಳಿಗೂ ನೀರು ಒದಗಿಸಬೇಕು ಎಂಬುದು ನನ್ನ ಆಶಯವಾಗಿದೆ. ಪಾರ್ಟಿ, ಪಕ್ಷ ಬಿಟ್ಟು ವಾಸು ಪರವಾಗಿ ನಿಲ್ಲಿ, ನಾನು ನಿಮ್ಮ ಪರವಾಗಿರುತ್ತೇನೆ ಎಂದು ಜನರಿಗೆ ಮನವಿ ಮಾಡಿದ್ದು ವಿಶೇಷ ಎನ್ನಿಸಿತು.