

ತುಮಕೂರು: ಸೊಪ್ಪು.. ಸೊಪ್ಪು ..ಬನ್ನಿ ,ಬನ್ನಿ, ಕಟ್ಟು ಹತ್ತು ರೂಪಾಯಿ, ಒಳ್ಳೆಯ ನಾಟಿ ಸೊಪ್ಪು. ಬೆಟ್ಟದ ನೆಲ್ಲಿಕಾಯಿ ತಗೋಳಿ, ಆರೋಗ್ಯಕ್ಕೆ ಬಹಳ ಒಳ್ಳೆಯದು. ನಾಟಿ ಪಪಾಯ ರುಚಿಯಾಗಿದೆ. ಎಳನೀರು ಬರೀ ಮೂವತ್ತು ಮಾತ್ರ. ಬೇಗ ಬನ್ನಿ ,ತಡಮಾಡಿದ್ರೆ ಸಿಗೋದಿಲ್ಲ….!
ಪ್ರತಿ ದಿನ ಪೆನ್ನು , ಪುಸ್ತಕ ಹಿಡಿದು ಬ್ಯಾಗ್ ಬೆನ್ನಿಗಾಕಿಕೊಂಡು ಬರುತ್ತಿದ್ದ ಮಕ್ಕಳಿಂದ ಸದಾ ಗಿಜಿಗೊಡುತ್ತಿದ್ದ ತಾಲೂಕಿನ ನಾಗವಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಶನಿವಾರ ಮಿನಿ ಸಂತೆಯೇ ಸೃಷ್ಠಿಯಾಗಿvತ್ತು, ಇಲ್ಲಿ ಮಕ್ಕಳೇ ವ್ಯಾಪಾರಿಗಳು, ಪೋಷಕರೇ ಗ್ರಾಹಕರು.
ಶಾಲಾ ಗಣಿತ ಸಂಘದ ವತಿಯಿಂದ ಮಕ್ಕಳಿಗೆ ಲೆಕ್ಕದ ಪರಿಕಲ್ಪನೆ ಮೂಡಿಸಲು ತಾವು ಬೆಳೆದ ಹಣ್ಣು, ತರಕಾರಿ , ಬೇಳೆ ಕಾಳು ಮತ್ತು ಸೊಪ್ಪು ಮಾರಾಟ ಮಾಡಲು ಶಾಲಾ ಹಂತದ ಮಕ್ಕಳ ಸಂತೆ ಏರ್ಪಾಡಾಗಿತ್ತು.
ಬೆಳಗ್ಗೆ ಸೂರ್ಯ ಉದಯವಾಗುತ್ತಿದ್ದಂತೆ , ಮಕ್ಕಳು ಶಾಲಾ ಪಠ್ಯದ ಬ್ಯಾಗ್ ಜತೆ ಮತ್ತೊಂದು ಬ್ಯಾಗ್ ಹಿಡಿದು, ತಮಗೆ ಇಷ್ಟವಾದ ತರಕಾರಿ, ಸೌತೆಕಾಯಿ, ಪಪಾಯ, ಸೀಬೇಕಾಯಿ, ನೆಲ್ಲಿ ಕಾಯಿ, ಎಳನೀರು, ಹೊತ್ತು ಹರ್ಷದಿಂದ ಶಾಲಾ ಆವರಣಕ್ಕೆ ಬಂದಿದ್ದರು.
ತಣ್ಣನೆ ವಾತಾವರಣದಲ್ಲೂ ಕೆಲವರು ಮೆಲ್ಲನೆ ಎಳನೀರು ಹೀರಿ , ಚಿರುಮುರಿ ಚಪ್ಪರಿಸಿದರು. ಬಹಳಷ್ಟು ಮಕ್ಕಳು ಅ¯್ಲೆ ತಯಾರಿಸುತ್ತಿದ್ದ ಚಿರುಮುರಿ, ಫ್ರೂಟ್‌ಸಾಲಾಡ್ ತಿನ್ನಲು ಮುಗಿಬಿದ್ದರು. ನೋಟು ಪಡೆದು, ಚಿಲ್ಲರೆ ನೀಡುವ ಕಾಯಕದಲ್ಲಿ ವ್ಯಾಪಾರಿ ಮಕ್ಕಳು ಮಗ್ನರಾಗಿದ್ದರು.
9ನೇ ತರಗತಿಯ ಸುನೀಲï, 8ನೇ ತರಗತಿಯ ಲಕ್ಷಿö್ಮÃ ಚುರುಕಾಗಿ ವ್ಯವಹರಿಸಿದರೆ, ರಂಗನಾಥ ತರಕಾರಿ ಅಂಗಡಿ ಮುಂದೆ ಸೌಮ್ಯವಾಗಿ ಕುಳಿತಿದ್ದನು. ಮನೀಶ್ ಮತ್ತು ಪ್ರಜ್ವಲï ಚಿರುಮುರಿಯಲ್ಲಿ 100 ರೂ ಬಂಡವಾಳ ಹಾಕಿ, 400 ರೂ ಲಾಭ ಗಳಿಸಿದರು. ಪ್ರಥ್ವಿ ತಂದಿದ್ದ ಎ¯್ಲÁ 20 ಎಳನೀರು ಖಾಲಿಯಾದವು. ಒಟ್ಟಾರೆ 600ಕ್ಕೂ ಹೆಚ್ಚು ಮಕ್ಕಳು , ಸಂತೆಯಲ್ಲಿ ತಮ್ಮದೆ ರೀತಿಯಲ್ಲಿ ಮಿಂದೆದ್ದರು.