

ತುಮಕೂರು: ವಿವಿಧ ವಸತಿ ಯೋಜನೆಯಲ್ಲಿ ತುರುವೇಕೆರೆ ತಾಲೂಕಿಗೆ 1505 ವಸತಿ ಮಂಜೂರಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದ್ದಾರೆ.
ತುರುವೇಕೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮಂಜೂರಾಗಿದ್ದ 3375 ಮನೆಗಳು ಕುಣಿಗಲ್‌ಗೆ ವರ್ಗಾವಣೆಯಾಗಿದ್ದರಿಂದ ಕೃಷ್ಣಪ್ಪ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು.
ವಸತಿ ಸಚಿವ ಜಮೀರ್ ಅಹ್ಮದ್ ಶಾಸಕರೊಂದಿಗೆ ಮಾತನಾಡಿ, 1505 ಮನೆಗಳನ್ನು ಕ್ಷೇತ್ರಕ್ಕೆ ನೀಡಲು ಒಪ್ಪಿಗೆ ನೀಡಿದ್ದರಿಂದ ಪ್ರತಿಭಟನೆ ಕೈ ಬಿಡಲಾಗಿದೆ ಎಂದರು.