ಶ್ರೀಕೃಷ್ಣ ವೇಷ ಸ್ಪರ್ಧೆ

krishna
Published on

ತುಮಕೂರು: ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ, ಜನಕಲ್ಯಾಣ ಟ್ರಸ್ಟ್, ಸಂಸ್ಕಾರ ಭಾರತೀ, ರಾಷ್ಟಿçÃಯಯ ಮಾನವ-ಪರಿಸರ ಸಂರಕ್ಷಣಾ ಪಡೆ ಸಹಯೋಗದಲ್ಲಿ 37ನೇ ಶ್ರೀಕೃಷ್ಣ ವೇಷ ಸ್ಪರ್ಧೆ ಸೆ.10ರಂದು ನಗರದ ಶ್ರೀರಾಮಮಂದಿರದಲ್ಲಿ ಆಯೋಜಿಸಲಾಗಿದೆ.

ಸಾರ್ವಜನಿಕರಿಗೆ, ಮಕ್ಕಳಿಗಾಗಿ ಮೂರು ಹಂತದಲ್ಲಿ ಭಗವದ್ಗೀತೆ ಕಂಠಪಾಠ, ದೇವರ ನಾಮ, ಚಿತ್ರಕಲಾ, ರಸಪ್ರಶ್ನೆ, ಏಕಪಾತ್ರಾಭಿನಯ,ಜನಪದ ಗೀತೆ,ಭಜನಾ, ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಸೆ.2ರಂದು ಮತ್ತು 3ರಂದು ನಡೆಯಲಿದೆ.

4 ವರ್ಷದೊಳಗಿನ ಮಕ್ಕಳು, 5 ರಿಂದ 7 ವರ್ಷದವರೆಗಿನ ಮಕ್ಕಳು ಹಾಗೂ 8 ರಿಂದ 10 ವರ್ಷದವರೆಗಿನ ಮಕ್ಕಳು ಹೀಗೆ ಮೂರು ಹಂತದವರೆಗೆ ಸ್ಫರ್ಧೆ ನಡೆಯಲಿದೆ. ಸೆ.10ರಂದು ಶ್ರೀಕೃಷ್ಣವೇಷ ಸ್ಫರ್ಧೆ ನಡೆಯಲಿದೆ.

ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಹಗ್ಗ, ಜಗ್ಗಾಟ ಸ್ಪರ್ಧೆ, ಶ್ರೀಕೃಷ್ಣ ವೇಷದಾರಿ ಮಕ್ಕಳಿಗೆ ಮರಳಿನಲ್ಲಿ ವಿಗ್ರಹ ಹುಡುಕುವ ಸ್ಪರ್ಧೆ ಕೂಡ ಹಮ್ಮಿಕೊಳ್ಳ ಲಾಗಿದೆ. ಸೆ.10 ರಂದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net