

ತುಮಕೂರು: ನಗರದ ಚಿನ್ಮಯ ಗೀತಾ ಮಂದಿರ `ಚಿನ್ಮಯ ಮಿಷನ್' ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೆ.6ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 7ಕ್ಕೆ ಶ್ರೀಕೃಷ್ಣನಿಗೆ ಅಭಿಷೇಕ, ವಿಷ್ಣು ಸಹಸ್ರನಾಮ ಅರ್ಚನೆ, ಆರತಿ ಅಲಂಕಾರ, ಸಂಜೆ 4ಕ್ಕೆ ಸಿದ್ಧಗಂಗಾ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಶ್ರೀಕೃಷ್ಣನ ಶೋಭಾ ಯಾತ್ರೆ ನಡೆಯಲಿದೆ.
ಸಂಜೆ 6.30ರಿಂದ 8ರ ವರೆಗೆ ಮೆಳೆಕೋಟೆ ಮಾರುತಿ ಭಜನಾ ಮಂಡಳಿಯವರಿAದ ಭಕ್ತಿ-ಭಾವ ತರಂಗಿಣಿ ಹಾಗೂ ರಾತ್ರಿ 8ರಿಂದ 8.30ರ ವರೆಗೆ ಭಕ್ತಿಗೀತೆಗಳ ಗಾಯನವಿದೆ.