ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಬೆಂಗಳೂರು ವಿಭಾಗದ ಪ್ರಾಬಲ್ಯ

17yrs girls 1place gulbarga
Published on

ತುಮಕೂರು: ಬೆಂಗಳೂರು ವಿಭಾಗದ ಬಾಲಕರು ಮತ್ತು ಬಾಲಕಿಯರು ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮೇಲುಗೈ ಸಾಧಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರು.


ಇಲ್ಲಿನ ಸರ್ವೋದಯ ಮೈದಾನದಲ್ಲಿ ಇಂದು ನಡೆದ ರಾಜ್ಯ ಮಟ್ಟದ ಪಂದ್ಯಾವಳಿಯ17 ರ ವಯೋಮಾನದಲ್ಲಿ ಬೆಂಗಳೂರು ವಿಭಾಗದ ಬಾಲಕರು, ಕಲ್ಬುರ್ಗಿ ವಿಭಾಗದ ಬಾಲಕಿಯರು, 14 ರ ವಯೋಮಿತಿಯಲ್ಲಿ ಬೆಂಗಳೂರು ವಿಭಾಗದ ಬಾಲಕರು ಮತ್ತು ಬಾಲಕಿಯರು ಅಜೇಯ ಆಟವಾಡಿ ಗೆಲುವಿನ ಮೂಲಕ ಚಾಂಪಿಯನ್ ಆದರು.


ಅಂತಿಮ ಹಣಾಹಣಿಯ 17ರ ವಯೋಮಾನದ ಪಂದ್ಯದಲ್ಲಿ ಬೆಂಗಳೂರು ವಿಭಾಗದ ಬಾಲಕರು ಮತ್ತು ಬೆಳಗಾವಿ ವಿಭಾಗದ ಆಟಗಾರರ ನಡುವೆ ಪ್ರಥಮ ಸ್ಥಾನಕ್ಕಾಗಿ ಜಿದ್ದಾಜಿದ್ದಿ ಏರ್ಪಟ್ಟಿತು. ಆದರೆ ಚುರುಕಿನ ಓಟ ಮತ್ತು ಚಾಕಚಕ್ಯತೆಯ ಆಟವಾಡಿದ ಅತಿಥೇಯ ಬಾಲಕರು ಮೇಲುಗೈ ಸಾಧಿಸಿ ಪಂದ್ಯದಲ್ಲಿ ಜಯದ ನಗೆ ಬೀರಿದರು.

ಕಡೆಯವರೆಗೂ ಪಂದ್ಯವನ್ನು ಕಸಿದುಕೊಳ್ಳಲು ಯತ್ನಿಸಿದ ಬೆಳಗಾವಿ ಬಾಲಕರು ದ್ವಿತೀಯ ಸ್ಥಾನಕ್ಕೆ ತ್ರಪ್ತಿಪಟ್ಟರು. ಇದಕ್ಕೆ ಮುನ್ನ ನಡೆದ ಲೀಗ್ ಮಾದರಿಯ ಈ ಪಂದ್ಯಾವಳಿಯಲ್ಲಿ ಈ ಎರಡೂ ತಂಡಗಳು, ಎರಡೆರಡು ಗೆಲುವು ದಾಖಲಿಸಿದ್ದು , ಅಂತಿಮ ಪಂದ್ಯಕ್ಕೆ ಎಚ್ಚಿನ ರೋಚಕತೆ ಬಂದಿತ್ತು ಮತ್ತು ನೆರೆದಿದ್ದ ಸಹಸ್ರಾರು ಕ್ರೀಡಾ ಪ್ರೇಮಿಗಳನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.


ಅದೇ ರೀತಿ 17 ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕಲ್ಬುರ್ಗಿ ಆಟಗಾರ್ತಿಯರ ಛಲದ ಆಟಕ್ಕೆ ತಡೆಯೊಡ್ಡಲು ಎಲ್ಲರೂ ವಿಫಲರಾದರು. ಅವರ ಅಮೋಘ ಆಟಕ್ಕೆ ಸಾಂಘಿಕ ಗೆಲುವು ಮತ್ತು ಚಾಂಪಿಯನ್ ಪಟ್ಟವು ದೊರಕಿತು. ಆಡಿದ ಮೂರು ಪಂದ್ಯದಲ್ಲಿ ಗೆಲುವು ದಾಖಲಿಸಿದ ಆಟಗಾರ್ತಿಯ ಓಟಕ್ಕೆ ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆ ಮೂಲಕ ಅಭಿನಂದಿಸಿದರು.


14ರ ವಯೋಮಾನದ ಬಾಲಕ , ಬಾಲಕಿಯರ ಎರಡೂ ವಿಭಾಗದಲ್ಲಿ ಗೆಲುವು ಬೆಂಗಳೂರು ವಿಭಾಗಕ್ಕೆ ಲಭಿಸಿತು. ದ್ವಿತೀಯ ಸ್ಥಾನ ಕ್ರಮವಾಗಿ ಬೆಳಗಾವಿ ವಿಭಾಗಕ್ಕೆ ದೊರಕಿತು.


ಈ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಅಪ್ರತಿಮ ಪ್ರದರ್ಶನ ನೀಡಿದ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಬೆಸ್ಟ್ ಚೇಸರ್ -ಸುಲೇಮಾನ್ ಉಲ್ಲೆ ಖಾನ್ (ಬೆಂಗಳೂರು ವಿಭಾಗ), ಬೆಸ್ಟ್ ಡಿಫೇಂಡರ್ - ಹೇಮಾ ಸಾಗರ್(ಬೆಂಗಳೂರು).

ಬೆಸ್ಟ್ ಡೆಫೇಂಡರ್ ಹೇಮಾಸಾಗರ್(ಬೆಂಗಳೂರು ವಿಭಾಗ), ಬೆಸ್ಟ್ ಆಲ್‌ರೌಂಡರ್-ಮೌನೇಶ್(ಕಲುಬುರಗಿ ವಿಭಾಗ). ಹಾಗೂ ಬಾಲಕಿಯರಲ್ಲಿ ಬೆಸ್ಟ್ ಚೇಸರ್-ಪ್ರಾಪ್ತಿ(ಮೈಸೂರು ವಿಭಾಗ), ಬೆಸ್ಟ್ ಡಿಫೆಂಡರ್-ವಿಜಯಲಕ್ಷಿö್ಮÃ(ಬೆAಗಳೂರು ವಿಭಾಗ), ಬೆಸ್ಟ್ ಆಲ್‌ರೌಂಡರ್ ಗೌತಮಿ(ಬೆಳಗಾವಿ ವಿಭಾಗ).
17ರ ವಯೋಮಾನದ ಬಾಲಕರ ವಿಭಾಗ: ಬೆಸ್ಟ್ ಚೇಸರ್ ಕೃಷ್ಣ(ಬೆಂಗಳೂರು ವಿಭಾಗ), ಬೆಸ್ಟ್ ಡಿಫೆಂಡರ್ ಮದನ್‌ಕುಮಾರ್(ಮೈಸೂರು ವಿಭಾಗ), ಬೆಸ್ಟ್ ಆಲ್‌ರೌಂಡರ್ ವಿಕಾಸ್(ಬೆಂಗಳೂರು ವಿಭಾಗ).
ಬಾಲಕಿಯರ ವಿಭಾಗ ಬೆಸ್ಟ್ ಚೇಸರ್ ಮಮತಾ(ಬೆಂಗಳೂರು ವಿಭಾಗ), ಬೆಸ್ಟ್ ಡಿಫೆಂಡರ್ ಮಾನಸ(ಮೈಸೂರು ವಿಭಾಗ), ಬೆಸ್ಟ್ ಆಲ್‌ರೌಂಡರ್ ರೇಣುಕಾ(ಕಲುಬುರಗಿ) ಪದಕಕ್ಕೆ ಕೊರಳೊಡ್ಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net